ನವದೆಹಲಿ:ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಜೆಪಿ ಸಂಸದ ಇಂದು 38ನೇ ಚರ್ಷದ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಹುತಾತ್ಮಯೋದರ ಮಕ್ಕಳ ಜವಾಬ್ದಾರಿ ತೆಗೆದುಕೊಂಡು ಹೃದಯವಂತಿಕೆ ಮೆರೆದಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ಹುತಾತ್ಮ ಸೈನಿಕರ ಮಕ್ಕಳ ಜವಾಬ್ದಾರಿ ವಹಿಸಿಕೊಂಡ ಗಂಭೀರ್ - Gautam Gambhir's foundation news
ಭಾರತ ತಂಡದ ಅಗ್ರೆಸಿವ್ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದ ಗಂಭೀರ್ ತಮ್ಮ ಬರ್ತಡೇ ದಿನದಂದು ಹುತಾತ್ಮ ಸೈನಿಕರ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಹೃದಯವಂತಿಗೆ ಮೆರೆದಿದ್ದಾರೆ.
Gautam Gambhir
ಸದಾ ಭಾರತೀಯ ಸೈನಿಕರ ಪರ ಮಾತನಾಡುವ ಗಂಭೀರ್ ತಮ್ಮ 'ಗೌತಮ್ ಗಂಭೀರ್ ಫೌಂಡೇಶನ್' ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಹಳೆಯ ವಿಚಾರ.
ಬರ್ತಡೇ ಖುಷಿಯಲ್ಲಿರುವ ಗಂಭೀರ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಭಾರತೀಯ ಸೈನಿಕರ 100 ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ತಮ್ಮ 38ನೇ ಜನುಮದಿನವನ್ನ ಸಾರ್ಥಕಪಡಿಸಿಕೊಂಡಿದ್ದಾರೆ.