ಕರಾಚಿ: 10 ವರ್ಷಗಳ ನಂತರ ಕರಾಚಿಯಲ್ಲಿ ಮೊದಲ ಬಾರಿಗೆ ಕ್ರಿಕೆಟ್ ನಡೆಯುತ್ತಿದ್ದು, ಶ್ರೀಲಂಕಾ ರಕ್ಷಣೆಗಾಗಿ ಪಾಕಿಸ್ತಾನ ಸರ್ಕಾರ ಆಯೋಜಿಸಿರುವ ರಕ್ಷಣಾ ವ್ಯವಸ್ಥೆಯನ್ನು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗಂಭೀರ್ ಅಪಹಾಸ್ಯ ಮಾಡಿದ್ದಾರೆ.
2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಕರಾಚಿಯಲ್ಲಿ ಉಗ್ರರು ದಾಳಿ ಮಾಡಿದ ನಂತರ ಯಾವುದೇ ದೇಶಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು. ಆದರೆ 10 ವರ್ಷಗಳ ನಂತರ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಲಂಕಾ ಆಟಗಾರರಿಗೆ ಪಾಕ್ ಸರ್ಕಾರ ಪ್ರಧಾನಿಗೆ ನೀಡುವಂತಹ ಭದ್ರತೆ ನೀಡುತ್ತಿರುವುದಕ್ಕೆ ಗಂಭೀರ್ ಲೇವಡಿ ಮಾಡಿದ್ದಾರೆ.
ಶ್ರೀಲಂಕಾ ಆಟಗಾರರಿಗೆ ಪ್ರಧಾನಿ ಸರಿಸಮಾನ ಭದ್ರತೆ... ಅಪಹಾಸ್ಯ ಮಾಡಿದ ಗಂಭೀರ್
2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಕರಾಚಿಯಲ್ಲಿ ಉಗ್ರರು ದಾಳಿ ಮಾಡಿದ ನಂತರ ಯಾವುದೇ ದೇಶಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು. ಆದರೆ 10 ವರ್ಷಗಳ ನಂತರ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಲಂಕಾ ಆಟಗಾರರಿಗೆ ಪಾಕ್ ಸರ್ಕಾರ ಪ್ರಧಾನಿಗೆ ನೀಡುವಂತಹ ಭದ್ರತೆ ನೀಡುತ್ತಿರುವುದಕ್ಕೆ ಗಂಭೀರ್ ಲೇವಡಿ ಮಾಡಿದ್ದಾರೆ.
ಭಾರತದ ಗಡಿ ವ್ಯವಸ್ಥೆ ಹಾಗೂ ಕಾಶ್ಮೀರ ವಿಚಾರವಾಗಿ ಕ್ಯಾತೆ ತೆಗೆಯುವವರಿಗೆ ಟ್ವಿಟ್ಟರ್ನಲ್ಲಿ ತಕ್ಕ ಉತ್ತರ ನೀಡುವ ಗಂಭೀರ್ ಇದೀಗ ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಕ್ಕಾಗಿ ಅಲ್ಲಿನ ಸರ್ಕಾರ ನೀಡುತ್ತಿರುವ ಭದ್ರತೆ ಕುರಿತು "ಕಾಶ್ಮೀರಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಾ ಕರಾಚಿಯನ್ನು ಮೆರೆತಿದೆ" ಎಂದು ಪಾಕಿಸ್ತಾನದ ಕಾಲೆಳೆದಿದ್ದಾರೆ. ಆಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರು ಕಾಶ್ಮೀರದಲ್ಲಿ ಜನಸಾಮಾನ್ಯರು ಸಹ ಭಾರತೀಯ ಸೈನಿಕರಿಂದ ಹಲ್ಲೆಗೊಳಗಾಗುತ್ತಿದ್ದಾರೆ, ಅವರಿಗೆ ರಕ್ಷಣೆ ದೊರೆಯುತ್ತಿಲ್ಲ ಎಂದು ಆಗಾಗ್ಗೆ ಟ್ವೀಟ್ ಮಾಡುತ್ತಿದ್ದರು. ಅದಕ್ಕಾಗಿ ಗಂಭೀರ್ ದೇಶದ ಒಳಗೆ ಈ ರೀತಿ ಭದ್ರತೆ ಅವಶ್ಯಕತೆ ಇದೆ ಎಂದರೆ ಎಂತಹ ಸ್ಥಿತಿಯಲ್ಲಿ ಪಾಕಿಸ್ತಾನ ಇದೆ ಎಂಬುದರ ಕುರಿತು ಟ್ವೀಟ್ ಮೂಲಕ ವಿಡಿಯೋ ಹಾಕಿ ಕಾಲೆಳೆದಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು 67 ರನ್ಗಳಿಂದ ಮಣಿಸಿದೆ. ಪಾಕ್ ತಂಡದ ರನ್ ಮಷಿನ್ ಬಾಬರ್ ಅಜಂ ಆಕರ್ಷಕ ಶತಕ ಸಿಡಿಸಿ ದಾಖಲೆಯ ಜಯಕ್ಕೆ ಕಾರಣರಾಗಿದ್ದರು.