ನವದೆಹಲಿ: ನವರಾತ್ರಿ ಹಬ್ಬದ ವಿಶೇಷವಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ತಮ್ಮ ಎರಡು ಹೆಣ್ಣಮಕ್ಕಳ ಪಾದಪೂಜೆ ಮಾಡುವ ಮೂಲಕ ಆಶೀರ್ವಾದ ಪಡೆದುಕೊಂಡಿದ್ದಾರೆ.
ನವರಾತ್ರಿ ವಿಶೇಷವಾಗಿ ಕೆಲವು ಕಡೆ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಆದರೆ, ಗಂಭೀರ್ ತಮ್ಮ ಮಕ್ಕಳ ಪಾದಪೂಜೆಯನ್ನೇ ಮಾಡುವ ಮೂಲಕ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ನಾನೊಬ್ಬ ಎರಡು ಹೆಣ್ಣುಮಕ್ಕಳ ತಂದೆಯಾಗಿದ್ದು,ಪಾದೋಪಚಾರ(ಪೆಡಿಕ್ಯೂರ್)ಕೌಶಲ್ಯಗಳನ್ನು ಕ್ರಮೇಣ ಉತ್ತಮಗೊಳಿಸಿಕೊಂಡಿದ್ದೇನೆ.. ಇದರ ಜೊತೆಗೆ ಅಷ್ಟಮಿ ಪ್ರಯುಕ್ತ ಆಶೀರ್ವಾದವನ್ನೂ ತೆಗೆದುಕೊಂಡಿದ್ದೇನೆ. ಆದರೆ, ನಾನು ಮಾಡಿದ ಕೆಲಸಕ್ಕೆ ಬಿಲ್ ಯಾರಿಗೆ ಕಳುಹಿಸ ಬೇಕು ಎಂದು ತಮ್ಮ ಹೆಂಡತಿಯನ್ನು ಟ್ಯಾಗ್ ಮಾಡಿ ತಮಾಷೆಯ ಟ್ವೀಟ್ ಮಾಡಿದ್ದಾರೆ.
ಒಬ್ಬ ಸಂಸದರಾಗಿ, ಮಾಜಿ ಕ್ರಿಕೆಟಿಗನಾಗಿ ದೇಶದಲ್ಲಿ ಉತ್ತಮ ಹೆಸರು ಮಾಡಿರುವ ಗಂಭೀರ್ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.