ನವದೆಹಲಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಎಂ.ಎಸ್.ಧೋನಿ ತೆಗೆದುಕೊಂಡಿರುವ ನಿರ್ಧಾರ ಅದ್ಭುತವಾದದ್ದು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಯುವಕರಿಗೆ ಸ್ಪೂರ್ತಿಯಾಗಲಿದೆ ಧೋನಿ ನಿರ್ಧಾರ: ಗೌತಮ್ ಗಂಭೀರ್ - undefined
ಧೋನಿ ಅವರ ನಿರ್ಧಾರ ಅನೇಕ ಯುವಕರಿಗೆ ಭಾರತೀಯ ಸೇನೆ ಸೇರಲು ಸ್ಪೂರ್ತಿ ನಿಡಲಿದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಧೋನಿ ಉದ್ದೇಶದ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಗೌತಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮಾಹಿ ನಿರ್ಧಾರ ಅದ್ಭುತವಾದದ್ದು, ನಾನು ಹಲವು ಬಾರಿ ಹೇಳಿದ್ದೆ, ಸೇನೆ ಸಮವಸ್ತ್ರ ದರಿಸುವ ಉದ್ದೇಶ ಹೊಂದಿದ್ದರೆ, ಭಾರತೀಯ ಸೇನೆಯ ಜೊತೆ ಸ್ವಲ್ಪ ಸಮಯ ಕಳೆಯಬೆಕು ಎಂದಿದ್ದೆ. ಇದೀಗ ಧೋನಿ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ.ಅಲ್ಲದೆ ಧೋನಿ ಅವರ ನಿರ್ಧಾರ ಅನೇಕ ಯುವಕರಿಗೆ ಭಾರತೀಯ ಸೇನೆ ಸೇರಲು ಸ್ಪೂರ್ತಿ ನಿಡಲಿದೆ ಎಂದಿದ್ದಾರೆ.
ಧೋನಿಗೆ ಈಗಾಗಲೇ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದ್ದು ಕೆಲ ದಿನಗಳ ತರಬೇತಿಯನ್ನೂ ಪಡೆದಿದ್ದಾರೆ. ಇದೇ 31ರಂದು ಕಾಶ್ಮೀರದಲ್ಲಿರುವ ವಿಕ್ಟರ್ ಫೋರ್ಸ್ ಅನ್ನು ಧೋನಿ ಸೇರಲಿದ್ದು, ಆಗಸ್ಟ್ 15ರವರೆಗೆ ವಿವಿಧ ರೀತಿಯ ತರಬೇತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಗಸ್ತು ತಿರುಗುವುದು, ಕಾವಲುಗಾರಿಕೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮಾಹಿ ಪಾಲ್ಗೊಳ್ಳಲಿದ್ದಾರೆ.