ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ/ಸಂಸದ ಗೌತಮ್ ಗಂಭೀರ್ ಭಾರತ ತಂಡದ ಬಹುಚರ್ಚಿತ ನಾಲ್ಕನೇ ಕ್ರಮಾಂಕದ ಆಟಗಾರನ ಆಯ್ಕೆಯ ಬಗ್ಗೆ ಸ್ಪೆಷಲ್ ಟ್ವೀಟ್ ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಚಂದ್ರನ ದಕ್ಷಿಣ ಧ್ರುವದಲ್ಲಿಯೂ ಆಡಬಲ್ಲರು: ಗಂಭೀರ್ ಪ್ರಶಂಸೆ - ಸಂಜು ಸ್ಯಾಮ್ಸನ್
ಸ್ಯಾಮ್ಸನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಬೇಕಾದರೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಗಂಭೀರ್, ಸ್ಯಾಮ್ಸನ್ ಆಟವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ
ಯುವ ಆಟಗಾರ ಕೇರಳದ ಸಂಜು ಸ್ಯಾಮ್ಸನ್ ಏಕದಿನದಲ್ಲಿ 4ನೇ ಕ್ರಮಾಂಕಕ್ಕೆ ಸೂಕ್ತ ಎನ್ನುವ ಹರ್ಭಜನ್ ಸಿಂಗ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಗೌತಿ, ದಕ್ಷಿಣ ಭಾರತದ ಈ ಕ್ರಕೆಟಿಗನ ಶೈಲಿ ಅದ್ಭುತವಾಗಿದೆ. ಈತ ಚಂದ್ರನ ದಕ್ಷಿಣ ಧ್ರುವದಲ್ಲಿ ಬೇಕಾದರೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂದು ಸ್ಯಾಮ್ಸನ್ ಆಟವನ್ನು ವಿಶೇಷವಾಗಿ ಹೊಗಳಿದ್ದಾರೆ.
ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಟ್ವೀಟ್ ಮೂಲಕ ಯುವ ಆಟಗಾರ ಸಂಜು ಸ್ಯಾಮ್ಸನ್ ಏಕದಿನದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಆಟಗಾರ. ದಕ್ಷಿಣ ಆಫ್ರಿಕಾ ಎ ವಿರುದ್ಧ ಸ್ಯಾಮ್ಸನ್ ಉತ್ತಮ ಪ್ರದರ್ಶನ ತೋರಿದ್ದಲ್ಲದೆ ಆಟದ ಶೈಲಿ ಉತ್ತಮವಾಗಿದೆ ಎಂದಿದ್ದರು.