ಕರ್ನಾಟಕ

karnataka

By

Published : Dec 6, 2019, 7:24 PM IST

ETV Bharat / sports

ಐಪಿಎಲ್​ಗೆ ಗೌತಮ್ ಗಂಭೀರ್ ಕಂಬ್ಯಾಕ್: ಆಟಗಾರನಾಗಿ ಅಲ್ಲ, ಮಾಲೀಕನಾಗಿ

ಪೂರ್ವ ದೆಹಲಿ ಕ್ಷೇತ್ರದ ಸಂಸದ ಹಾಗೂ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಐಪಿಎಲ್​ ತಂಡವೊಂದರ ವ್ಯಾವಹಾರಿಕ ಪಾಲುದಾರಿಕೆ ಕೊಂಡುಕೊಳ್ಳಲು ತೀರ್ಮಾನಿಸಿದ್ದಾರೆ.

ಐಪಿಎಲ್ ತಂಡ ಖರೀದಿಸಲು ಗಂಭೀರ್ ಚಿಂತನೆ,Gautam Gambhir to buy stake in Delhi Capitals
ಗೌತಮ್ ಗಂಭೀರ್

ನವದೆಹಲಿ: 2018ರ ನಂತರ ಐಪಿಎಲ್​ನಿಂದ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೆ ಐಪಿಎಲ್​ಗೆ ಕಂಬ್ಯಾಕ್ ಮಾಡಲು ಸಿದ್ದರಾಗಿದ್ದಾರೆ.

ಕಳೆದ ವರ್ಷವಷ್ಟೇ ಎಲ್ಲಾ ಆವೃತ್ತಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಗೌತಿ ಮತ್ತೆ ಐಪಿಎಲ್​ ಜೊತೆಗಿನ ನಂಟಸ್ತಿಕೆಗೆ ಸಿದ್ದತೆ ನಡೆಸಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ತಂಡದ ಮಾಲೀಕನಾಗಿ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಪೂರ್ವ ದೆಹಲಿ ಕ್ಷೇತ್ರದ ಸಂಸದ ಗೌತಮ್ ಗಂಭೀರ್, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಶೇರು ಕೊಂಡುಕೊಳ್ಳಲು ಸಿದ್ದತೆ ನಡೆಸಿದ್ದಾರೆ. ಜೆಎಸ್​ಡಬ್ಲ್ಯೂ ಗ್ರೂಪ್ ಮತ್ತು ಜಿಎಂಆರ್​ ಗ್ರೂಪ್ ತಲಾ 50 ರಷ್ಟು ಪಾಲುದಾರಿಕೆ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ 10 ರಷ್ಟು ಪಾಲು ಕೊಂಡುಕೊಳ್ಳಲು ಗಂಭೀರ್ ತೀರ್ಮಾನ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈಗಾಗಲೇ ಈ ಬಗ್ಗೆ ಜಿಎಂಆರ್​ ಗ್ರೂಪ್​ನೊಂದಿಗೆ ಮಾತುಕತೆ ನಡೆದಿದೆ. 10 ರಷ್ಟು ಪಾಲು ಕೊಂಡುಕೊಳ್ಳಲು 100 ಕೋಟಿ ರೂಪಾಯಿ ನೀಡಲು ಗಂಭೀರ್ ತಯಾರಾಗಿದ್ದು, ಐಪಿಎಲ್ ಆಡಳಿತ ಮಂಡಳಿ ತೀರ್ಮಾನಕ್ಕೆ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಗಂಭೀರ್ ಐಪಿಎಲ್​ನಲ್ಲಿ ಕೆಕೆಆರ್​ ತಂಡದ ನಾಯಕನಾಗಿ ಎರಡು ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದು, ಯಶಸ್ವಿ ನಾಯಕ ಎಂಬ ಹೆಸರು ಹೊಂದಿದ್ದಾರೆ. ಕಡೆಯದಾಗಿ 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಗೌತಮ್​ ಗಂಭೀರ್​ ಆಡಿದ್ದರು.

ABOUT THE AUTHOR

...view details