ನವದೆಹಲಿ: ಭಾರತ ಮತ್ತು ಮೋದಿ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಅಫ್ರಿದಿ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಕೊರೊನಾದಿಂದ ಸಂಕಷ್ಟಕ್ಕೀಡಾದವರೆಗೆ ನೆರವಾಗಲು ಪಿಒಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ರಿದಿ, ನಾನು ಈ ಜಾಗಕ್ಕೆ ಹಲವು ದಿನಗಳಿಂದ ಬರಬೇಕೆಂದುಕೊಂಡಿದ್ದೆ, ಇದೀಗ ಆ ಅವಕಾಶ ಬಂದಿದೆ. ಜಗತ್ತನ್ನೇ ಮಹಾಮಾರಿ ಕೊರೊನಾ ಕಾಡುತ್ತುದೆ. ಆದರೆ ಭಾರತದ ಪ್ರಧಾನಿ ಮೋದಿ ಮನಸ್ಸಿನಲ್ಲಿ ಅದಕ್ಕಿಂದ ದೊಡ್ಡದಾದ ರೋಗ ಇದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಮೋದಿ ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮೋದಿ ವಿರುದ್ಧ ಪಿಒಕೆ ನಾಗರೀಕರನ್ನು ಕೆರಳಿಸುವ ಮಾತನಾಡಿದ್ದರು.
ಅಫ್ರಿದಿ ಈ ಹೇಳಿಕೆ ನೀಡುತ್ತಿದ್ದಂತೆ ಕಳೆದ ತಿಂಗಳು ಅಫ್ರಿದಿ ಫೌಂಡೇಶನ್ಗೆ ನೆರವು ನೀಡುವಂತೆ ಮನವಿ ಮಾಡಿದ್ದ ಧವನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ನಲ್ಲಿ ಕಿಡಿ ಕಾರಿದ್ದರು. ಇನ್ನು ಅಫ್ರಿದಿ ಭಾರತದ ಮಾತನಾಡಿದಾಗಲೆಲ್ಲಾ ಸಿಡಿದೇಳುವ ಗಂಭೀರ್ ಈ ಬಾರಿಯೂ ಪಾಕ್ ಮಾಜಿ ಆಟಗಾರನಿಗೆ ತಿರುಗೇಟು ನೀಡಿದ್ದಾರೆ.
'ಪಾಕಿಸ್ತಾನದ ಬಳಿ 7 ಲಕ್ಷ ಸೇನೆ, 20 ಕೋಟಿ ಜನರ ಬೆಂಬಲವಿದೆ ಎಂದು 16 ವರ್ಷದ ಶಾಹಿದ್ ಅಫ್ರಿದಿ ಹೇಳುತ್ತಲೇ ಇದ್ದಾರೆ. ಹಾಗಿದ್ದರೂ ಕಳೆದ 70 ವರ್ಷಗಳಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ. ಅಫ್ರಿದಿ, ಇಮ್ರಾನ್ ಮತ್ತು ಬಜ್ವಾನಂತಹ ಜೋಕರ್ಗಗಳು ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ಪಾಕಿಸ್ತಾನದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಆದರೆ ಅವರಿಗೆ ಕಾಶ್ಮೀರ ಜಡ್ಜ್ಮೆಂಟ್ ದಿನದವರೆಗೂ ಸಿಗುವುದಿಲ್ಲ. ಬಾಂಗ್ಲಾದೇಶ ನೆನಪಿಲ್ವಾ?' ಎಂದು ಟ್ವೀಟ್ ಮಾಡಿ ಅಫ್ರಿದಿಯನ್ನು ಲೇವಡಿ ಮಾಡಿದ್ದಾರೆ.