ಲಂಡನ್:ಕಳೆದ ಕೆಲವು ವರ್ಷಗಳಿಂದ ಐಸಿಸಿ ಟೂರ್ನಮೆಂಟ್ನಲ್ಲಿ ಭಾರತ ಆಧಾರ ಸ್ಥಂಭವಾಗಿದ್ದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ 2019ರ ವಿಶ್ವಕಪ್ನಿಂದ ಗಾಯದಿಂದ ಹೊರಬಿದ್ದ ಹಿನ್ನೆಲೆ ಮಾಜಿ ಆಟಗಾರ ಗೌತಮ್ ಗಂಭಿರ್ ಗೆಳೆಯನಿಗೆ ಹೃದಯ ಸ್ಪರ್ಶಿ ಸಂದೇಶ ರವಾನಿಸಿದ್ದಾರೆ.
ಜೂನ್ 9 ರಂದು ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬೆರಳಿಗೆ ಗಾಯಕ್ಕೊಳಗಾಗಿದ್ದ ಶಿಖರ್ ಧವನ್ಗೆ ಚೇತರಿಕೆಗಾಗಿ 3 ವಾರಗಳ ವಿಶ್ರಾಂತಿ ನೀಡಲಾಗಿತ್ತು. ಆದರೆ, ವೈದ್ಯರ ಗಮನದಲ್ಲಿದ್ದ ಧವನ್ ಕಳೆದ 10 ದಿನಗಳಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ವಿಶ್ವಕಪ್ನಿಂದಲೇ ಹೊರಬಿದ್ದಿದ್ದರು. ಇವರ ಜಾಗಕ್ಕೆ ಸ್ಟ್ಯಾಂಡ್ ಬೈ ಆಟಗಾರನಾಗಿದ್ದ ರಿಷಭ್ ಪಂತ್ ಇದೀಗ ತಂಡ ಸೇರಿಕೊಂಡಿದ್ದಾರೆ.
ಧವನ್ ಕುರಿತು ಟ್ವೀಟ್ ಮಾಡಿರುವ ಗಂಭಿರ್ " ಶಿಖರ್ ಧವನ್ ಸಂಪೂರ್ಣ ವಿಶ್ವಕಪ್ನ ಭಾಗವಾಗಿಲ್ಲದಿರುವುದು ನಿಜಕ್ಕೂ ನಿರಾಶಾದಾಯಕ ವಿಚಾರವಾಗಿದೆ. ಆತ ತಂಡಕ್ಕೆ ತುಂಬಾ ಅಗತ್ಯವುಳ್ಳನಾಗಿದ್ದ. ನನ್ನ ಆಲೋಚನೆಯ ಪ್ರಕಾರ ನೀನು ಚಿಂತಿಸಬೇಡ, ನನಗನ್ನಿಸಿದ ಹಾಗೆ ಇದು ಕ್ರಿಕೆಟ್ನ ಕೊನೆಯ ದಿನಗಳಲ್ಲ' ಎಂದು ಧವನ್ರ ಕ್ರಿಕೆಟ್ ಜೀವನ ಇಷ್ಟಕ್ಕೆ ಮುಗಿದಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಜೊತೆಗೆ ಅದೇ ಟ್ವೀಟ್ನಲ್ಲಿ ಧವನ್ ಬದಲಿಗೆ ಅವಕಾಶ ಪಡೆದಿರುವ ರಿಷಭ್ ಪಂತ್ಗೆ ಶುಭ ಕೋರಿದ್ದು, ನಾವು ರಿಷಭ್ ಪಂತ್ಗೆ ಒತ್ತಡ ಹೇರುವುದು ಬೇಡ ಎಂದು ತಿಳಿಸಿದ್ದಾರೆ.
ಧವನ್ 2013ರ ಚಾಂಪಿಯನ್ ಟ್ರೋಫಿ, 2014ರ ಏಷ್ಯಾಕಪ್, 2015 ರ ವಿಶ್ವಕಪ್,2017ರ ಚಾಂಪಿಯನ್ ಟ್ರೋಫಿ, 2018 ರ ವಿಶ್ವಕಪ್ನಲ್ಲಿ ಭಾರತ ತಂಡ ಗರಿಷ್ಠ ಸ್ಕೋರರ್ ಆಗಿದ್ದರು. ಇವರ ಅನುಪಸ್ಥಿತಿ ನಿಜಕ್ಕೂ ತಂಡಕ್ಕೆ ಆಘಾತ ತಂದಿದೆ.