ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಈಡನ್ ಗಾರ್ಡನ್‌ಗೆ ಭೇಟಿ ನೀಡಿ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಿದ್ಧತೆಗಳ ಬಗ್ಗೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರೊಂದಿಗೆ ಚರ್ಚಿಸಿದ್ದಾರೆ.
ಗಂಗೂಲಿ, ಬಂಗಾಳ ತರಬೇತುದಾರ ಅರುಣ್ ಲಾಲ್ ಅವರೊಂದಿಗೆ ತಂಡದ ಸಿದ್ಧತೆಗಳ ಬಗ್ಗೆ ಚರ್ಚಿಸಿ, ಕ್ರಿಕೆಟಿಗರೊಂದಿಗೆ ಕೂಡ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಭಾರತದ ಮಾಜಿ ಬ್ಯಾಟ್ಸ್‌ಮನ್ ವಿ.ವಿ.ಎಸ್.ಲಕ್ಷ್ಮಣ್ ಮಾತನಾಡಿ, ಬಂಗಾಳವು ಉತ್ತಮ ಸಂಪರ್ಕದಲ್ಲಿದ್ದು, ಚುಟುಕು ಕ್ರಿಕೆಟ್ ಟೂರ್ನಿಗೆ ಸಿದ್ಧವಾಗಿದೆ ಎಂದು ಹೇಳಿದ್ದರು.
"ಬಂಗಾಳ ಆಟಗಾರರು ನಿಜವಾಗಿಯೂ ಉತ್ತಮವಾಗಿ ತಯಾರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಹೊಡೆಯುವ ರೀತಿ ನನಗೆ ತುಂಬಾ ಸಂತೋಷವಾಯಿತು. ಹೆಚ್ಚು ಸ್ಪರ್ಧಾತ್ಮಕವಾಗಿದ್ದ ಬಂಗಾಳ ಟಿ-20 ಚಾಲೆಂಜ್ ಉತ್ತಮ ಸಂಪರ್ಕದಲ್ಲಿರಲು ಸಹಾಯ ಮಾಡಿತು. ಫಾರ್ಮ್ನಲ್ಲಿರುವ ಹಲವು ಆಟಗಾರರು ಉತ್ತಮ ಪ್ರದರ್ಶನ ತೋರಲಿದ್ದು, ಬಂಗಾಳ ಪಂದ್ಯಾವಳಿಯನ್ನು ಗೆಲ್ಲುತ್ತದೆ ಎಂದು ಭಾವಿಸುತ್ತೇನೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.