ಕರ್ನಾಟಕ

karnataka

ETV Bharat / sports

ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆಗೈದ ಮೊದಲ ಪಂದ್ಯದಲ್ಲಿ ಬಂಗಾಳ ಟೈಗರ್‌ ಗುಡುಗಿತ್ತು.. ನೆನಪಿಸಿಕೊಂಡ ದಾದಾ!! - ಇಂಗ್ಲೆಂಡ್​ ವಿರುದ್ಧ ಗಂಗೂಲಿ ಪದಾರ್ಪಣೆ

ಎಡಗೈ ಬ್ಯಾಟ್ಸ್​ಮನ್​ ಸೌರವ್​ ಗಂಗೂಲಿ ಜೂನ್​ 20 1996ರಂದು ಟೆಸ್ಟ್​ ಕ್ರಿಕೆಟ್​ಗೆ ಲಾರ್ಡ್ಸ್​ ಮೈದಾನದಲ್ಲಿ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಟೆಸ್ಟ್​ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ದಾದಾ ಆ ಪಂದ್ಯದಲ್ಲಿ 301 ಎಸೆತಗಳಲ್ಲಿ 20 ಬೌಂಡರಿಗಳ ಸಹಾಯದಿಂದ 131 ರನ್​ ಸಿಡಿಸಿದ್ದರು.

Ganguly shares throwback picture from his Test debut
ಸೌರವ್​ ಗಂಗೂಲಿ

By

Published : May 7, 2020, 9:33 AM IST

ಮುಂಬೈ :ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಲಾರ್ಡ್ಸ್​ ಮೈದಾನದಲ್ಲಿ ತಮ್ಮ ಪದಾರ್ಪಣೆ ಪಂದ್ಯದ ನೆನಪನ್ನು ಬುಧವಾರ ಶೇರ್​ ಮಾಡಿಕೊಂಡಿದ್ದಾರೆ.

ತಮ್ಮ ಇನ್ಸ್‌ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿರುವ ದಾದಾ, "ನೆನೆಪು.. 1996ರಲ್ಲಿ ಲಾರ್ಡ್ಸ್​ ಮೈದಾನದಲ್ಲಿ ನಾನು ಟೆಸ್ಟ್​ ಪದಾರ್ಪಣೆ ಮಾಡುವ ಹಿಂದಿನ ದಿನ ತರಬೇತಿ ನಡೆಸುತ್ತಿದ್ದ ಕ್ಷಣ" ಎಂದು ಕ್ಯಾಪ್ಷನ್​ನೀಡಿದ್ದಾರೆ.

ಎಡಗೈ ಬ್ಯಾಟ್ಸ್​ಮನ್​ ಸೌರವ್​ ಗಂಗೂಲಿ ಜೂನ್​ 20, 1996ರಂದು ಟೆಸ್ಟ್​ ಕ್ರಿಕೆಟ್​ಗೆ ಲಾರ್ಡ್ಸ್​ ಮೈದಾನದಲ್ಲಿ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಟೆಸ್ಟ್​ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ದಾದಾ ಆ ಪಂದ್ಯದಲ್ಲಿ 301 ಎಸೆತಗಳಲ್ಲಿ 20 ಬೌಂಡರಿಗಳ ಸಹಾಯದಿಂದ 131 ರನ್​ ಸಿಡಿಸಿದ್ದರು.

ಸೌರವ್​ ಗಂಗೂಲಿ

ಬಂಗಾಳ ಮಹಾರಾಜ ಸಿಡಿಸಿದ ಶತಕದ ನೆರವಿನಿಂದ ಭಾರತ ತಂಡ 429 ರನ್​ಗಳಿಸಿ ಇಂಗ್ಲೆಂಡ್​ ವಿರುದ್ಧ ಮುನ್ನಡೆ ಸಾಧಿಸಲು ನೆರವಾಗಿದ್ದರು. ಆದರೆ, ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ನಂತರದ ಕೆಲವು ವರ್ಷಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಗಂಗೂಲಿ, ಯಶಸ್ವಿ ನಾಯಕ ಎನಿಸಿಕೊಂಡರು. ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಸರಣಿ ಜಯಿಸಿ ಸಾಧನೆ ಮಾಡಿದ್ದರು. 2003ರ ವಿಶ್ವಕಪ್​ ಫೈನಲ್​ ಪ್ರವೇಶಿಸುವಲ್ಲಿ ಗಂಗೂಲಿ ಮಹತ್ವದ ಪಾತ್ರವಹಿಸಿದ್ದರು. ಭಾರತ ತಂಡದ ಪರ 113 ಟೆಸ್ಟ್​ ಹಾಗೂ 311 ಏಕದಿನ ಪಂದ್ಯಗಳನ್ನಾಡಿದ್ದರು. 18,575 ರನ್​ಗಳಿಸಿದ್ದಾರೆ ಬಂಗಾಳ ಟೈಗರ್‌‌. 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ABOUT THE AUTHOR

...view details