ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಸಂಫೂರ್ಣವಾಗಿ ಆರಾಮಾಗಿದ್ದಾರೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮೀಯ ಅವರ ಪುತ್ರಿ ಹಾಗೂ ಗಂಗೂಲಿ ಅವರ ಹಿತೈಷಿಯಾಗಿರುವ ವೈಶಾಲಿ ದಾಲ್ಮೀಯ ತಿಳಿಸಿದ್ದು, ಶೀಘ್ರದಲ್ಲೇ ಆಸ್ಪತ್ರಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಗಂಗೂಲಿ ತಮ್ಮ ಎದೆನೋವಿನ ತಪಾಸಣೆಗಾಗಿ ಬುಧವಾರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಂತರ ಅವರನ್ನು ಪರೀಕ್ಷಿಸಿದ ವೈದ್ಯರು, ಗಂಗೂಲಿಯವರ ಪ್ಯಾರಾಮೀಟರ್ಸ್ ಸ್ಥಿರವಾಗಿವೆ ಎಂದು ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದ್ದರು. ದಾದಾರ ಆಪ್ತ ಮೂಲಗಳು ಕೂಡ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿವೆ.
"ಅವರು(ಗಂಗೂಲಿ) ಸಂಪೂರ್ಣ ಹುಷಾರಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಅವರು ತುಂಬಾ ಆರಾಮವಾಗಿ ಕಾಣುತ್ತಿದ್ದಾರೆ. ನನ್ನ ಪ್ರಕಾರ ಅವರು ಅಹಿತಕರವಾಗೇನೂ ಕಾಣುತ್ತಿಲ್ಲ. ಅಲ್ಲಿ ವೈದ್ಯರಿದ್ದಾರೆ, ಅವರು ಗಂಗೂಲಿಯವರ ಮೇಲೆ ನಿಗಾ ವಹಿಸಿದ್ದಾರೆ. ಶೀಘ್ರದಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ವೈಶಾಲಿ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡುತ್ತಿದ್ದಾರೆ ಮತ್ತು ಅವೆಲ್ಲಾ ಮುಗಿದ ನಂತರ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಗಂಗೂಲಿ ಪಶ್ಚಿಮ ಬಂಗಾಳದ ನಂಬರ್ ಒನ್ ವ್ಯಕ್ತಿ ಮತ್ತು ಅವರಿಗೆ ಏನಾದರೂ ಸಂಭವಿಸಿದರೆ, ವೈದ್ಯರು ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ " ಎಂದು ಬ್ಯಾಲಿ ಅಸೆಂಬ್ಲಿ ಕ್ಷೇತ್ರದ ಎಂಎಲ್ಎ ಆಗಿರುವ ವೈಶಾಲಿ ತಿಳಿಸಿದ್ದಾರೆ.
ಇದನ್ನು ಓದಿ:ಚಿಂತೆ ಪಡಬೇಕಾಗಿಲ್ಲ, ಗಂಗೂಲಿ ತಪಾಸಣೆಗಷ್ಟೇ ಬಂದಿದ್ದಾರೆ : ಆಸ್ಪತ್ರೆ ಮಾಹಿತಿ