ಕೋಲ್ಕತಾ :ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಹೃದಯದ ಪರಿಸ್ಥಿತಿಯನ್ನು ಪರಿಶೀಲಿಸಲು ಬುಧವಾರ ಆಗಮಿಸಿದ್ದಾರೆ. ಅವರ ಪ್ರಮುಖ ಪ್ಯಾರಾಮೀಟರ್ಸ್ ಸ್ಥಿರವಾಗಿವೆ ಎಂದು ಅಪೋಲೋ ಗ್ಲೆನೆಗಲ್ಸ್ ಆಸ್ಪತ್ರೆ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿದೆ.
"48 ವರ್ಷದ ಸೌರವ್ ಗಂಗೂಲಿ ಅವರ ಹೃದಯದ ಪರಿಸ್ಥಿತಿ ಪರೀಶಿಲಿಸಿಕೊಳ್ಳುವುದಕ್ಕೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಅವರು ಕೊನೆಯ ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಪ್ಯಾರಾಮೀಟರ್ಸ್ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವರ ಪ್ರಮುಖ ಪ್ಯಾರಾಮೀಟರ್ಸ್ ಸ್ಥಿರವಾಗಿವೆ" ಎಂದು ಬುಲೆಟಿನ್ನಲ್ಲಿ ತಿಳಿಸಲಾಗಿದೆ.