ಕರ್ನಾಟಕ

karnataka

ETV Bharat / sports

ದಾದಾ ಕಟ್ಟಿದ ತಂಡದಲ್ಲಿ ಲಾಭ ಪಡೆದಿದ್ದು ಎಂಎಸ್​ ಧೋನಿ: ಮಾಜಿ ಕ್ರಿಕೆಟಿಗ ಮಣೀಂದರ್​ ಸಿಂಗ್​ - ಮಣೀಂದರ್​ ಸಿಂಗ್​

ಭಾರತಕ್ಕೆ ಧೋನಿ 2007ರಲ್ಲಿ ಟಿ-20 ವಿಶ್ವಕಪ್​ ಹಾಗೂ 2011 ರಲ್ಲಿ ಏಕದಿನ ವಿಶ್ವಕಪ್​ ಗೆದ್ದುಕೊಟ್ಟಿದ್ದರು. ಧೋನಿ ಅದೃಷ್ಟವಿದ್ದರಿಂದ ವಿಶ್ವಕಪ್​ ತಂಡದ ನಾಯಕರಾಗಿದ್ದರು. ಆದರೆ ಧೋನಿಗೆ ಬಲಿಷ್ಠ ತಂಡವನ್ನು ಕಟ್ಟಿಕೊಟ್ಟಿದ್ದು ಸೌರವ್​ ಗಂಗೂಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್​ ಧೋನಿ -ಗಂಗೂಲಿ
ಎಂಎಸ್​ ಧೋನಿ -ಗಂಗೂಲಿ

By

Published : Aug 8, 2020, 2:58 PM IST

ನವದೆಹಲಿ: ಭಾರತಕ್ಕೆ 3 ಐಸಿಸಿ ಟ್ರೋಫಿ ತಂದುಕೊಟ್ಟಿರುವ ಧೋನಿಗಿಂತ, ಭಾರತಕ್ಕೆ ಚೊಚ್ಚಲ ವಿಶ್ವಕಪ್​ ತಂದು ಕೊಟ್ಟ ಕಪಿಲ್ ದೇವ್​ಗಿಂತಲೂ ಸೌರವ್​ ಗಂಗೂಲಿ ಶ್ರೇಷ್ಠ ನಾಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ಮಣೀಂದರ್​ ಸಿಂಗ್​ ತಿಳಿಸಿದ್ದಾರೆ.

ಭಾರತಕ್ಕೆ ಧೋನಿ 2007ರಲ್ಲಿ ಟಿ-20 ವಿಶ್ವಕಪ್​ ಹಾಗೂ 2011 ರಲ್ಲಿ ಏಕದಿನ ವಿಶ್ವಕಪ್​ ಗೆದ್ದುಕೊಟ್ಟಿದ್ದರು. ಧೋನಿ ಅದೃಷ್ಟವಿದ್ದಿದ್ದರಿಂದ ವಿಶ್ವಕಪ್​ ತಂಡದ ನಾಯಕರಾಗಿದ್ದರು. ಆದರೆ, ಧೋನಿಗೆ ಬಲಿಷ್ಠ ತಂಡವನ್ನು ಕಟ್ಟಿಕೊಟ್ಟಿದ್ದು ಸೌರವ್​ ಗಂಗೂಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

1982 ಹಾಗೂ 1993ರ ನಡುವೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಣೀಂದರ್​, ಭಾರತದ 1983 ರ ವಿಶ್ವಕಪ್ ತಂಡದ ನಾಯಕ ಕಪಿಲ್ ದೇವ್ ಭಾರತಕ್ಕೆ ವಿಶ್ವಕಪ್​ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಎಲ್ಲರಲ್ಲೂ ನಂಬಿಕೆ ಬರುವಂತೆ ಮಾಡಿದರು. ಇದು ನಂತರ ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ಅವರಂತಹವರಿಗೆ ಸಹಾಯ ಮಾಡಿತು.

ಇನ್ನು ಧೋನಿ ಅದೃಷ್ಟವಂತ. ಏಕೆಂದರೆ ಅವರು ನಾಯಕರಾಗುವ ಮುನ್ನ ಗಂಗೂಲಿ ನಾಯಕರಾಗಿದ್ದರು. ಗಂಗೂಲಿ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸಬಲ್ಲ ತಂಡವನ್ನು ಕಟ್ಟಿದ್ದರು. ಆ ತಂಡವನ್ನು ಧೋನಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಣೀಂದರ್​ ಸಿಂಗ್​ ತಿಳಿಸಿದ್ದಾರೆ.

ಮಾಜಿ ಎಡಗೈ ಸ್ಪಿನ್ನರ್, ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಅತ್ಯುತ್ತಮ ಭಾರತೀಯ ನಾಯಕ ಎಂದು ಹೆಸರಿಸಿದ್ದಾರೆ. ಏಕೆಂದರೆ ಅವರ ಪ್ರತಿಭೆಯನ್ನು ಗುರುತಿಸುತ್ತಿದ್ದರು ಹಾಗೂ ಆ ಆಟಗಾರರ ಯಶಸ್ಸಿನ ಹಿಂದೆ ನಿಲ್ಲುತ್ತಿದ್ದರು ಎಂದು ಹೇಳಿದ್ದಾರೆ.

ಇದಕ್ಕೆ ಉದಾಹರಣೆಯಂದರೆ, ದಾದಾ ನಾಯಕನಾದ ಮೇಲೆ ಮಂಕಾಗಿದ್ದ ಯುವರಾಜ್​ ಸಿಂಗ್​ರನ್ನು ಹೊರತಂದರೂ, ತಂಡದಿಂದ ಹೊರಗಿಟ್ಟಿದ್ದ ಸ್ಪಿನ್ನರ್​ ಹರ್ಭಜನ್​ಗೆ ಅವಕಾಶ ನೀಡಿದರು ಎಂದು ಮಣೀಂದರ್​ ಗಂಗೂಲಿ ನಾಯಕತ್ವ ಏಕೆ ಶ್ರೇಷ್ಠ ಎಂದು ವಿವರಿಸಿದ್ದಾರೆ.

ABOUT THE AUTHOR

...view details