ಕರ್ನಾಟಕ

karnataka

ETV Bharat / sports

ಬೆಂಗಾಲ್​ ಮಹಾರಾಜನ ಜನ್ಮದಿನ: ಅಭಿಮಾನಿಗಳು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಗಳಿವು! - Cricket fraternity wishes to Ganguly's 48yh birthday

ನಾಯಕನಾಗಿ ತಂಡವನ್ನು ಸಮರ್ಥವಾಗಿ ಮುನ್ನೆಡೆಸಿರುವ ದಾದಾ ತಮ್ಮ ನಾಯಕತ್ವದ ಅವಧಿಯಲ್ಲಿ146 ಏಕದಿನ ಪಂದ್ಯಗಳಲ್ಲಿ 76 ಪಂದ್ಯಗಳಲ್ಲಿ ಗೆಲುವು ಹಾಗೂ 65 ಸೋಲು ಕಂಡಿದ್ದಾರೆ. 49 ಟೆಸ್ಟ್ ಪಂದ್ಯಗಳಲ್ಲಿ 21 ಪಂದ್ಯಗಳನ್ನು ಗೆಲುವು ಮತ್ತು 13 ರಲ್ಲಿ ಸೋಲು ಕಂಡಿದ್ದು. 15ರಲ್ಲಿ ಡ್ರಾ ಫಲಿತಾಂಶ ಹೊರಬಿದ್ದಿದೆ.

ಸೌರವ್​ ಗಂಗೂಲಿ ಬರ್ತಡೇ
ಸೌರವ್​ ಗಂಗೂಲಿ ಬರ್ತಡೇ

By

Published : Jul 8, 2020, 2:15 PM IST

ಮುಂಬೈ: ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯುತ್ತಮ ನಾಯಕ, ದಾದಾ, ಬಂಗಾಳದ ಹುಲಿ ಎಂದೇ ಕರೆಯಲ್ಪಡುವ ಸೌರವ್​ ಗಂಗೂಲಿ ಇಂದು ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಗಂಗೂಲಿ ಭಾರತ ಕ್ರಿಕೆಟ್​ಗೆ ನೀಡಿದ ಕೊಡುಗೆಯನ್ನು ಒಂದು ಬಾರಿ ಮೆಲುಕು ಹಾಕೋಣ.

ನಾಯಕನಾಗಿ ತಂಡವನ್ನು ಸಮರ್ಥವಾಗಿ ಮುನ್ನೆಡೆಸಿರುವ ದಾದಾ ತಮ್ಮ ನಾಯಕತ್ವದ ಅವಧಿಯಲ್ಲಿ146 ಏಕದಿನ ಪಂದ್ಯಗಳಲ್ಲಿ 76 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, 65 ಸೋಲು ಕಂಡಿದ್ದಾರೆ. 49 ಟೆಸ್ಟ್ ಪಂದ್ಯಗಳಲ್ಲಿ 21 ಪಂದ್ಯಗಳನ್ನು ಗೆಲುವು ಮತ್ತು 13 ರಲ್ಲಿ ಭಾರತ ತಂಡ ಸೋಲು ಕಂಡಿದೆ. 15ರಲ್ಲಿ ಡ್ರಾ ಫಲಿತಾಂಶ ಹೊರಬಿದ್ದಿದೆ.

ಬೆಂಗಾಲ್​ ಮಹಾರಾಜನಿಗೆ 48ರ ವಸಂತ

ಭಾರತ ಕ್ರಿಕೆಟ್​ ಜಗತ್ತಿನಲ್ಲಿ ಅಜರಾಮರವಾಗಿ ಉಳಿಯುವ ಹೆಸರೆಂದರೆ ಅದು ಸೌರವ್​ ಗಂಗೂಲಿ. ಕ್ರಿಕೆಟ್​ನಲ್ಲಿ ಸಹಸ್ರಾರು ರನ್​ ಗಳಿಸಿದ ಸಚಿನ್​, ಐಸಿಸಿಯ ಎಲ್ಲ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಎಂ.ಎಸ್.ಧೋನಿ ಹಾಗೂ ಜಂಟಲ್​ ಮ್ಯಾನ್​ ಖ್ಯಾತಿಯ ದ್ರಾವಿಡ್​ ಇವರೆಲ್ಲರೂ ಭಾರತ ಕಂಡ ಶ್ರೇಷ್ಠ ಆಟಗಾರರು. ಆದರೆ, ಭಾರತ ತಂಡವನ್ನು ಕ್ರಿಕೆಟ್​ ಲೋಕದಲ್ಲಿ ಗುರುತಿಸುವಂತೆ ಮಾಡಿದವರು ಮಾತ್ರ ಸೌರವ್​ ಗಂಗೂಲಿ.

ಅಭಿಮಾನಿಗಳ ಮನದಲ್ಲಿದ್ದ ಫಿಕ್ಸಿಂಗ್ ಭೂತವನ್ನು ಬಡಿದೋಡಿಸಿ ಕ್ರಿಕೆಟ್​ ಪ್ರೇಮ ಬೆಳೆಸಿದ ಗಂಗೂಲಿ

2000ರಲ್ಲಿ ಭಾರತ ತಂಡ ಫಿಕ್ಸಿಂಗ್​ ಆರೋಪದಿಂದ ಜರ್ಜರಿತವಾಗಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಗಂಗೂಲಿ ಅಲ್ಲಿಂದ ವಿಶ್ವ ಕ್ರಿಕೆಟ್​ ಅನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿರೋದು ಬಹಿರಂಗವಾಗಿ, ಅಭಿಮಾನಿಗಳು ಕ್ರಿಕೆಟ್​ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದರು. ಅದೇ ಕೋಟ್ಯಂತರ ಅಭಿಮಾನಿಗಳನ್ನು ಮತ್ತೆ ಕ್ರಿಕೆಟ್​ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದವರು ಇದೇ ಬಂಗಾಳದ ಟೈಗರ್​

ಸೌರವ್​ ಗಂಗೂಲಿ

ಭಾರತ ಕ್ರಿಕೆಟ್​ ತಂಡಕ್ಕೆ ಯುವಕರ ಸೇರ್ಪಡೆಯಲ್ಲಿ ಪ್ರಮುಖ ಪಾತ್ರ

1999ರ ವಿಶ್ವಕಪ್​ ನಂತರ ಭಾರತ ತಂಡವನ್ನು ಕಟ್ಟುವ ಜವಾಬ್ಧಾರಿ ವಹಿಸಿಕೊಂಡ ಗಂಗೂಲಿ ಹರಭಜನ್​ ಸಿಂಗ್​, ಜಹೀರ್​ ಖಾನ್​, ಮೊಹಮ್ಮದ್​ ಕೈಫ್​, ಯುವರಾಜ್​ ಸಿಂಗ್​ ಅವರಂತಹ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಿದರು. ಮುಂದೆ ಅವರೆಲ್ಲರೂ ಭಾರತ ತಂಡಕ್ಕೆ ಯಾವ ರೀತಿ ಸೇವೆ ಸಲ್ಲಿಸಿದರು ಎಂಬುದು ಇಡೀ ಕ್ರಿಕೆಟ್​ ಜಗತ್ತಿಗೆ ಗೊತ್ತಿದೆ.

ಸ್ಲೆಡ್ಜರ್​ಗಳ ಪಾಲಿಗೆ ಹುಲಿ ಈ ಬೆಂಗಾಲ್​ ಮಹಾರಾಜ್

ಸೌರವ್ ಗಂಗೂಲಿ ಅದ್ಭುತ ನಾಯಕ ಆಗಿರಬಹುದು, ಆದರೆ ಅದೇ ರೀತಿ ಅಗ್ರೆಸಿವ್​ನಲ್ಲೂ ಇವರನ್ನು ಮೀರಿಸುವವರೂ ಯಾರೂ ಇಲ್ಲ. ತಂಡದಲ್ಲಿರುವ ಯಾವೊಬ್ಬ ಆಟಗಾರನ ವಿರುದ್ಧ ಎದುರಾಳಿ ಪಡೆಯ ಆಟಗಾರ ಸ್ಲೆಡ್ಜಿಂಗ್ ಮಾಡಿದರೆ, ಮೈದಾನದಲ್ಲೇ ತಿರುಗೇಟು ಕೊಡುತ್ತಿದ್ದರು. ಇದಕ್ಕೆ ಉದಾಹರಣೆಯೆಂದರೆ ನಾಟ್​ವೆಸ್ಟ್​ ಸರಣಿ ಗೆದ್ದಾಗ ಫ್ಲಿಂಟಾಫ್​ ವಿರುದ್ಧ ಸೇಡಿಗಾಗಿ ಶರ್ಟ್​ ಬಿಚ್ಚಿ ಕುಣಿದಾಡಿದ್ದರು. ಅಲ್ಲದೇ ದ್ರಾವಿಡ್​ ಅವರನ್ನು ಕೆಣಿಕಿದ ಲಂಕಾದ ರಸೆಲ್​ ಅವರನ್ನು ಅರ್ನಾಲ್ಡ್​​​​​​​ ಅವರನ್ನ ಆನ್​ಫೀಲ್ಡ್​ನಲ್ಲಿ ಅವಾಜ್​​ ಹಾಕಿ ತಣ್ಣಗಾಗಿಸಿದ್ದ ದಾದಾರ ಅಗ್ರೆಸಿವ್​ನೆಸ್​ ಇನ್ನು ನಮ್ಮ ಕಣ್ಣ ಮುಂದಿದೆ

ಸೌರವ್​ ಗಂಗೂಲಿ

ಧೋನಿಗಾಗಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು ಕ್ರಿಕೆಟ್​ನಲ್ಲಿ ತೆರೆಮರೆಗೆ ಸರಿದ ದಾದಾ

ಭಾರತ ತಂಡವನ್ನು ಕಟ್ಟಿದ ಗಂಗೂಲಿ ಆರಂಭದಲ್ಲಿ ಸ್ಥಿರ ಪ್ರದರ್ಶನ ತೋರಲು ಪರದಾಡುತ್ತಿದ್ದ ಎಂಎಸ್​ ಧೋನಿಗೆ ತಮ್ಮ ಮೂರನೇ ಕ್ರಮಾಂಕವನ್ನು ಬಿಟ್ಟುಕೊಟ್ಟು ತಾವು ಕೆಳ ಕ್ರಮಾಂಕದಲ್ಲಿ ಆಡಿದರು. ಇದರ ಪರಿಣಾಮ ಅವರು ಕ್ರಿಕೆಟ್ ಜೀವನವೇ ಅಂತ್ಯವಾಯಿತು. ಆದರೆ, ಭಾರತ ತಂಡಕ್ಕೆ ಶ್ರೇಷ್ಠ ವಿಕೆಟ್​ ಕೀಪರ್​ ಹಾಗೂ ನಾಯಕನನ್ನ ದೊರಕಿಸಿಕೊಟ್ಟ ಕೀರ್ತಿ ದಾದಾಗೆ ಸಲ್ಲುತ್ತದೆ. ಇದರ ಜೊತೆಗೆ ಕೋಟ್ಯಂತರ ಅಭಿಮಾನಿಗಳ ಕನಸಾಗಿದ್ದ ವಿಶ್ವಕಪ್​ ಟ್ರೋಫಿ ಭಾರತಕ್ಕೆ ಒಲಿಯುವಂತೆ ಮಾಡುವಲ್ಲಿ ಸೌರವ್​ ಅಂದು ಧೋನಿಗಾಗಿ ಮಾಡಿದ ತ್ಯಾಗದಿಂದಲೇ ಎಂದರೆ ಅತಿಶಯೋಕ್ತಿಯಲ್ಲ.

ಸೌರವ್​ ಗಂಗೂಲಿ

ಒಟ್ಟಾರೆ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಕ್ರಿಕೆಟ್​ ಆಟವನ್ನು ಇತರ ಆಟಗಳಿಗಿಂತ ಹೆಚ್ಚು ಇಷ್ಪಡುತ್ತಾರೆ ಎಂದರೆ ಅದು ಸೌರವ್​ ಗಂಗೂಲಿಯಿಂದ ಮಾತ್ರ. ಇವರ ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್​ನಲ್ಲಿ ನಾಟ್​ವೆಸ್ಟ್​ ಸರಣಿ, ಪಾಕಿಸ್ತಾನದಲ್ಲಿ ಟೆಸ್ಟ್​ ಸರಣಿ ,ವಿದೇಶಿಗಳಲ್ಲಿ ಟೆಸ್ಟ್​ ಪಂದ್ಯಗಳ ಗೆಲುವು ಹಾಗೂ 2003 ರ ವಿಶ್ವಕಪ್​ನಲ್ಲಿ ಫೈನಲ್​ ತಲುಪಿತ್ತು. ಅವರು ಇಂದು 48 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿರುವ ದಾದಾರ ಮುಂದಿನ ಜೀವನ ಸುಖವಾಗಿರಲಿ, ಅವರ ಕ್ರಿಕೆಟ್​ ಪ್ರೇಮ ಮತ್ತಷ್ಟು ವರ್ಷಗಳ ಹೀಗೆ ಇರಲಿ ಎಂದು ಶುಭಕೋರೋಣ​.

ABOUT THE AUTHOR

...view details