ಮುಂಬೈ: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಹಾಗೂ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಟಿ20 ಕ್ರಿಕೆಟ್ ಮಾದರಿಯನ್ನು ನಾಲ್ಕು ಇನ್ನಿಂಗ್ಸ್ಗಳಾಗಿ ಪರಿವರ್ತಿಸುವ ಆಲೋಚನೆಯನ್ನು ಅಸಾಂಪ್ರದಾಯಿಕ ಎಂದಿದ್ದಾರೆ.
"ಟಿ20 ಕ್ರಿಕೆಟ್ ಅನ್ನು ಎರಡು ಇನ್ನಿಂಗ್ಸ್ಗಳಾಗಿ ವಿಭಾಗಿಸುವ ಆಲೋಚನೆಯ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಸಚಿನ್ ಕೆಲವು ವರ್ಷಗಳ ಹಿಂದೆ ಸಲಹೆ ನೀಡಿದ್ದ 50 ಓವರ್ಗಳ ಆಟವನ್ನು ಬೇಕಾದರೆ 4 ಇನ್ನಿಂಗ್ಸ್ಗಳಾಗಿ ಮಾಡಲು ಪ್ರಯತ್ನಿಸಿಬಹುದು. ಏಕೆಂದರೆ, ಇದರಲ್ಲಿ 25 ಓವರ್ಗಳ ಆಟ ಆಡಲು ಅವಕಾಶವಿರುತ್ತದೆ ಎಂದು ಗಂಭೀರ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
"ಟಿ20 ಕ್ರಿಕೆಟ್ ಸಾಂಪ್ರದಾಯಿಕವಾಗಿ ಇರಬೇಕು. ಅದು ಇಂಡಿಯನ್ ಪ್ರೀಮಿಯರ್ ಅಥವಾ ಬಿಗ್ಬ್ಯಾಶ್ ನೋಡುಗರನ್ನು ಸೆಳೆಯುತ್ತಿವೆ. ಅಭಿಮಾನಿಗಳನ್ನು ಆಕರ್ಷಿಸುವ ಮೂಲಕ ಮೈದಾನಕ್ಕೆ ಕರೆತರುತ್ತಿದೆ. ಟಿ20ಯಲ್ಲಿ ನಾಲ್ಕು ಇನ್ನಿಂಗ್ಸ್ ತರುವುದು ತುಂಬಾ ದೂರಾಲೋಚನೆ ಎನಿಸಿಕೊಳ್ಳಲಿದೆ. ನಾನು ಈಗಲು ಟಾರ್ಗೆಟ್ ದಾಖಲಿಸಿ ಅದನ್ನು ಯಶಸ್ವಿಯಾಗಿ ಬೆನ್ನತ್ತುವುದಕ್ಕೆ ಆಥವಾ ಡಿಫೆಂಡ್ ಮಾಡಿಕೊಳ್ಳುವುದನ್ನು ನೋಡಲು ಇಷ್ಟಪಡುತ್ತೇನೆ" ಎಂದು ಲೀ ಹೇಳಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ನಾಲ್ಕು ಇನ್ನಿಂಗ್ಸ್ಗಳಾಗಿ ವಿಂಗಡಿಸುವುದರ ಬಗ್ಗೆ ಮಾತನಾಡಿದ ಗಂಭೀರ್, "ನಾನು ಇದನ್ನು ಬೆಂಬಲಿಸುತ್ತೇನೆ, ಆದರೆ, ಇಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಭಾವಿಸಿದ್ದೇನೆ. ಆದರೆ ಟಿ20ಯಲ್ಲಿ ಕ್ರಿಕೆಟ್ನಲ್ಲಿ ಇದು ಸಾಧ್ಯವಿಲ್ಲ. 10 ಓವರ್ಗಳ ಇನ್ನಿಂಗ್ಸ್ ಆಡುವುದು ತುಂಬಾ ಚಿಕ್ಕ ಇನ್ನಿಂಗ್ಸ್ ಆಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.