ನವದೆಹಲಿ: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಸದಾ ರೋಮಾಂಚನಕಾರಿಯಾಗಿ ಕೂಡಿರುವ ಚೆನ್ನೈ-ಮುಂಬೈ ಮುಖಾಮುಖಿಯಲ್ಲಿ ರೋಹಿತ್ ಬಳಗ ಗೆಲುವು ಪಡೆಯಲಿದೆ ಎಂದು ಗಂಭೀರ್ ಭವಿಷ್ಯ ನುಡಿದಿದ್ದಾರೆ. ರೈನಾ-ಹರ್ಭಜನ್ ಸಿಂಗ್ ತಂಡದಲ್ಲಿಲ್ಲದಿರುವುದು ಧೋನಿ ಟೀಮ್ಗೆ ಹಿನ್ನಡೆಯಾಗುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
" ನಾನು ನಿಜವಾಗಿಯು ಬುಮ್ರಾ ಮತ್ತು ಬೌಲ್ಟ್ ಹೊಸ ಚೆಂಡಿನಲ್ಲಿ ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ನೋಡಲು ಬಹಳ ಉತ್ಸುಕನಾಗಿ ಕಾಯುತ್ತಿದ್ದೇನೆ. ಯಾಕೆಂದರೆ, ಇವರಿಬ್ಬರೂ ವಿಶ್ವದರ್ಜೆಯ ಬೌಲರ್ಸ್ ಮತ್ತು ಟಿ20 ಕ್ರಿಕೆಟ್ನಲ್ಲಿ ವಿಕೆಟ್ ಪಡೆಯುಲು ಇರುವ ಬೌಲಿಂಗ್ ಆಯ್ಕೆಗಳು. ಎಡಗೈ ವೇಗಿಬ ಬೌಲ್ಟ್ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ಗಳಗಳಿಗೆ ಒಳ ನುಗ್ಗುವಂತೆ ಬೌಲಿಂಗ್ ಮಾಡಬಲ್ಲರು. ಬುಮ್ರಾ ಅವರ ಅಸಂಪ್ರದಾಯಿಕ ಬೌಲಿಂಗ್ ದಾಳಿ ನಡೆಸಲಿದ್ದಾರೆ. ಇವರಿಬ್ಬರನ್ನು ಎದುರಿಸುವುದು ಸಿಎಸ್ಕೆಗೆ ಸವಾಲಿನ ಕೆಲಸ " ಎಂದು ಗಂಭೀರ್ ಮುಂಬೈ ಬಲ ತಿಳಿಸಿದ್ದಾರೆ.
ಇದರ ಜೊತೆಗೆ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದ ಸುರೇಶ್ ರೈನಾ 3ನೇ ಕ್ರಮಾಂದಲ್ಲಿ ಆಡದಿರುವುದು ಹಾಗೂ ದೀರ್ಘ ಸಮಯದಿಂದ ಕ್ರಿಕೆಟ್ ಆಡದಿರುವ ಶೇನ್ ವಾಟ್ಸನ್ ಆರಂಭಿಕನಾಗಿ ಬುಮ್ರಾ ಮತ್ತು ಬೌಲ್ಟ್ ಸವಾಲನ್ನು ಹೇಗೆ ಎದುರಿಸಲಿದ್ದಾರೆ. ಇನ್ನು, ಅವರು ಯಾರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ತಂಡದ ಸಮತೋಲನ ಮತ್ತು ಬ್ಯಾಟಿಂಗ್ ಆಳವನ್ನು ನೋಡಿದರೆ ಮುಂಬೈ ಇಂಡಿಯನ್ಸ್ ತಂಡ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ. ತಂಡದ ಗೆಲುವು ಸೋಲುಗಳ ಲೆಕ್ಕಾಚಾರ ನೋಡಿದರೆ ಆಡಿರುವ 30 ಪಂದ್ಯಗಳಲ್ಲಿ ಮುಂಬೈ 18ರಲ್ಲಿ ಹಾಗೂ ಸಿಎಸ್ಕೆ 12 ರಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಕಳೆದ 4 ಮುಖಾಮುಖಿಯಲ್ಲಿ ಮುಂಬೈ ತಂಡವೇ ಗೆಲುವು ಸಾಧಿಸಿದೆ.