ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಕ್ರಿಕೆಟರ್ ವೃತ್ತಿಯಿಂದ ರಾಜಕಾರಣಿಯಾಗಿಯಾಗಿ ಬದಲಾಗಿರುವ ಗಂಭೀರ್ ಕೋಟ್ಯಂತರ ಭಾರತೀಯರ ಕನಸಾಗಿರುವ ರಾಮ ಮಂದಿರಕ್ಕೆ ತಮ್ಮ ಹಾಗೂ ತಮ್ಮ ಕುಟುಂಬದ ಪರವಾಗಿ ಈ ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
"ಅದ್ಭುತವಾದ ರಾಮ ದೇವಾಲಯ ಎಲ್ಲಾ ಭಾರತೀಯರ ಕನಸಾಗಿದೆ. ದೀರ್ಘಕಾಲದಿಂದ ಇದ್ದ ಸಮಸ್ಯೆ ಅಂತಿಮವಾಗಿ ಬಗೆಹರಿದಿದೆ. ಇದು ದೇಶದಲ್ಲಿ ಏಕತೆ ಮತ್ತು ಶಾಂತಿಗೆ ದಾರಿ ಮಾಡಿಕೊಡಲಿದೆ. ಈ ಪ್ರಯತ್ನಕ್ಕೆ ನನ್ನ ಮತ್ತು ನನ್ನ ಕುಟುಂಬದಿಂದ ಒಂದು ಸಣ್ಣ ಕೊಡುಗೆಯಾಗಿ ಈ ಹಣ ನೀಡುತ್ತಿದ್ದೇನೆ" ಎಂದು ಪೂರ್ವ ದೆಹಲಿ ಸಂಸದರಾಗಿರುವ ಗಂಭೀರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.