ಕೋಲ್ಕತ್ತಾ: ಭಾರತದಲ್ಲಿ ನಡೆಯುತ್ತಿರುವ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾದ ಹಿರಿಯ ಆಟಗಾರರನ್ನು ಮೈದಾನದಲ್ಲಿ ಒಂದು ಸುತ್ತು ಕರೆದೊಯ್ಯಲಾಗಿದೆ.
ಈಡನ್ ಗಾರ್ಡನ್ನಲ್ಲಿ ಹಾಲಿ,ಮಾಜಿ ಕ್ರಿಕೆಟರ್ಗಳಿಂದ ಸ್ಪೆಷಲ್ ರೌಂಡ್..! - ಈಡನ್ ಗಾರ್ಡನ್ನಲ್ಲಿ ಹೊನಲು ಬೆಳಕಿನ ಪಂದ್ಯ
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷಗಾದಿಗೆ ಏರಿದ ಬಳಿಕ ನಡೆದ ಮಹತ್ವದ ಬದಲಾವಣೆಯಲ್ಲಿ ಭಾರತದಲ್ಲಿ ಚೊಚ್ಚಲ ಅಹರ್ನಿಶಿ ಟೆಸ್ಟ್ ಇಂದು ಸಾಧ್ಯವಾಗಿದೆ.
ಈಡನ್ ಗಾರ್ಡನ್ನಲ್ಲಿ ಹಾಲಿ,ಮಾಜಿ ಕ್ರಿಕೆಟರ್ಗಳಿಂದ ಸ್ಪೆಷಲ್ ರೌಂಡ್
ಪಂದ್ಯ ಟೀ ವಿರಾಮದ ವೇಳೆ ಹಿರಿಯ ಆಟಗಾರರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ಜಿ.ಆರ್ ವಿಶ್ವನಾಥ್, ವೆಂಕಟೇಶ್ ಪ್ರಸಾದ್ ಮಾತ್ರವಲ್ಲದೆ ಮಹಿಳಾ ಕ್ರಿಕೆಟರ್ಗಳಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿಯವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಮೈದಾನದಲ್ಲಿ ಒಂದು ರೌಂಡ್ ಬರಲಾಗಿದೆ.
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷಗಾದಿಗೆ ಏರಿದ ಬಳಿಕ ನಡೆದ ಮಹತ್ವದ ಬದಲಾವಣೆಯಲ್ಲಿ ಭಾರತದಲ್ಲಿ ಚೊಚ್ಚಲ ಅಹರ್ನಿಶಿ ಟೆಸ್ಟ್ ಇಂದು ಸಾಧ್ಯವಾಗಿದೆ. ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾದ ಹಿರಿಯ ಆಟಗಾರರಿಗೆ ವಿಶೇಷ ಗೌರವ ನೀಡಲಾಗಿದೆ.