ಜಮೈಕಾ: ಭಾರತ ತಂಡ ಜಮೈಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 238 ರನ್ಗಳ ಅಂತರ್ ಬೃಹತ್ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ಜಮೈಕಾ ತಂಡ ಭಾರತ ತಂಡಕ್ಕೆ ಬ್ಯಾಟಿಂಗ್ ನೀಡಿತು. ಭಾರತ ತಂಡದ ಆರಂಭಿಕರಾದ ದೀಪಕ್ ಮಲಿಕ್ 34, ವೆಂಕಟೇಶ್ವರ ರಾವ್ 28 ಎಸೆತಗಳಲ್ಲಿ 53 ರನ್ಗಳಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುನಿಲ್ ರಮೇಶ್ 47 ಎಸೆತಗಳಲ್ಲಿ ಔಟಾಗದೆ 107 ರನ್ಗಳ ಸಹಾಯದಿಂದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 286 ರನ್ಗಳಿಸಿದರು.