ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಜೊತೆಗೇ ಸಿಡ್ನಿಗೆ ಹಾರಲಿದ್ದಾರೆ ಐಸೋಲೇಟ್ ಆಗಿರುವ ಐವರು ಆಟಗಾರರು - ಆಸ್ಟ್ರೇಲಿಯಾ vs ಭಾರತ ಟೆಸ್ಟ್

ಉಪನಾಯಕ ರೋಹಿತ್ ಶರ್ಮಾ, ಶುಬ್ಮನ್​ ಗಿಲ್​, ವಿಕೆಟ್ ಕೀಪರ್​ ರಿಷಭ್ ಪಂತ್​, ನವದೀಪ್​ ಸೈನಿ ಹಾಗೂ ಪೃಥ್ವಿ ಶಾ ಬಯೋಬಬಲ್​ ನಿಯಮ ಉಲ್ಲಂಘನೆ ಮಾಡಿರುವ ಕುರಿತು ತನಿಖೆ ನಡೆಯುತ್ತಿದ್ದರೂ ತಂಡದೊಂದಿಗೆ ಪ್ರಯಾಣಿಸುವುದನ್ನು ನಿರ್ಬಂಧಿಸಿಲ್ಲ ಎಂದು ತಿಳಿದುಬಂದಿದೆ. ​

ಭಾರತ vs ಆಸ್ಟ್ರೇಲಿಯಾ
ಭಾರತ ತಂಡ

By

Published : Jan 3, 2021, 6:30 PM IST

ಮೆಲ್ಬೋರ್ನ್​: ಬಯೋಬಬಲ್​ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಐಸೋಲೇಟ್​ ಆಗಿರುವ 5 ಮಂದಿ ಆಟಗಾರರು 3ನೇ ಟೆಸ್ಟ್​ಗಾಗಿ ಸಿಡ್ನಿಗೆ ಚಾರ್ಟೆಡ್​ ಫ್ಲೈಟ್​ನಲ್ಲಿ ಸೋಮವಾರ ಪ್ರಯಾಣಿಸಲಿದ್ದಾರೆ ಎಂದು ​ತಿಳಿದು ಬಂದಿದೆ.

"ನೀವು ಸಿಎ ಹೇಳಿಕೆಯನ್ನು ಎಚ್ಚರಿಕೆಯಿಂದ ಓದಿ. ಅದು ನಿಯಮ ಉಲ್ಲಂಘನೆ ಎಂದು ಎಂದಿಗೂ ಹೇಳಲಿಲ್ಲ. ಆದರೆ ಆಟಗಾರರಿಂದ ಉಲ್ಲಂಘನೆಯಾಗಿದೆಯೇ ಎಂದು ನಿರ್ಧರಿಸಲು ತನಿಖೆಯ ಮೂಲಕ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಆ ಐವರು ಆಟಗಾರರು ಸಿಡ್ನಿಗೆ ತೆರಳಲು ಯಾವುದೇ ನಿರ್ಬಂಧವಿಲ್ಲ. ನಾಳೆ ಮಧ್ಯಾಹ್ನ ಇಡೀ ತಂಡ ಸಿಡ್ನಿಗೆ ಹಾರಾಟ ನಡೆಸುತ್ತಿದೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನು ಓದಿ: ಮತ್ತೆ ಕ್ವಾರಂಟೈನ್​ ಅಸಾಧ್ಯವೆಂದ ಟೀಂ​ ಇಂಡಿಯಾಗೆ ಕ್ವೀನ್ಸ್​ಲ್ಯಾಂಡ್​ ಸರ್ಕಾರದ ತಿರುಗೇಟು

ಶುಕ್ರವಾರ ಅಭಿಮಾನಿಯೊಬ್ಬ ಭಾರತೀಯ ಆಟಗಾರರನ್ನು ರೆಸ್ಟೋರೆಂಟ್​ಗೆ ಭೇಟಿಯಾಗಿದ್ದ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ, ರಿಷಭ್​ ಪಂತ್​ರನ್ನು ತಬ್ಬಿಕೊಂಡಿದ್ದೆ ಎಂದು ಸುಳ್ಳು ಹೇಳಿದ್ದರಿಂದ ಈ ವಿವಾದ ಉಂಟಾಗಿದೆ ಎಂದು ಆ ಅಧಿಕಾರಿ ಘಟನೆಯ ಹಿಂದಿನ ಸತ್ಯವನ್ನು ಹೇಳಿದ್ದಾರೆ.

ABOUT THE AUTHOR

...view details