ಮ್ಯಾಂಚೆಸ್ಟರ್: ಬುಧವಾರದಿಂದ ಮ್ಯಾಂಚೆಸ್ಟ್ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಫ್ರಂಟ್ಫೂಟ್ ನೋಬಾಲ್ಗಳನ್ನು ಮೂರನೇ ಅಂಫೈರ್ ನಿರ್ಧರಿಸಲಿದ್ದಾರೆ ಎಂದು ಐಸಿಸಿ ಖಚಿತಪಡಿಸಿದೆ.
ಭವಿಷ್ಯದಲ್ಲಿ ದೀರ್ಘಾವಧಿಯ ಸ್ವರೂಪದಲ್ಲಿ ತಂತ್ರಜ್ಞಾನದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಈ ಸರಣಿಯಲ್ಲಿ ತಂತ್ರಜ್ಞಾನದ ಬಳಕೆ ಮೂಲಕ ಪ್ರಯತ್ನಿಸಲಾಗುವುದು ಎಂದು ಐಸಿಸಿ ಅಪೆಕ್ಸ್ ಕ್ರಿಕೆಟ್ ಬಾಡಿ ತಿಳಿಸಿದೆ.
" ಎರಡು ತಂಡಗಳ ಬೆಂಬಲದೊಂದಿಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಫ್ರಂಟ್ಫೂಟ್ ನೋಬಾಲ್ ತಂತ್ರಜ್ಞಾನವನ್ನು ಬಳಸಲಾಗುವುದು. ಟೆಸ್ಟ್ ಕ್ರಿಕೆಟ್ನಲ್ಲಿ ಭವಿಷ್ಯದಲ್ಲಿ ಈ ತಂತ್ರಜ್ಞಾನದ ಬಳಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಟೆಸ್ಟ್ ಸರಣಿಯಲ್ಲಿ ಅದರ ಕಾರ್ಯಕ್ಷಮತೆ ಪರೀಕ್ಷಿಸಲಾಗುತ್ತದೆ" ಎಂದು ಐಸಿಸಿ ತಿಳಿಸಿದೆ.
ಇನ್ನು ಈಗಾಗಲೆ ಐಸಿಸಿ ವಿಶ್ವಕಪ್ ಸೂಪರ್ ಲೀಗ್ನಲ್ಲೂ ಫ್ರಂಟ್ಫೂಟ್ ನೋ ಬಾಲ್ಗಳನ್ನು ಟಿವಿ ಅಂಪೈರ್ ಮಾನಿಟರಿಂಗ್ ಮಾಡಲಿದ್ದಾರೆ ಎಂದು ಐಸಿಸಿ ಘೋಷಣೆ ಮಾಡಿತ್ತು. ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ಪ್ರಯೋಗಿಸಲು ಮುಂದಾಗಿದೆ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಮೊದಲ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಇಂದಿನಿಂದ ಆರಂಭವಾಗಲಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಒಂದು ಭಾಗವಾಗಿದೆ.