ಕರ್ನಾಟಕ

karnataka

ETV Bharat / sports

ನೈರೋಬಿಯಿಂದ ಮ್ಯಾಂಚೆಸ್ಟರ್​ವರೆಗೆ: ಮಹೇಂದ್ರ ಸಿಂಗ್ ಧೋನಿ ಯಶೋಗಾಥೆ - ಧೋನಿಯ ಸಾಧನೆಗಳು

ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಕೂಲ್, ಅಭಿಮಾನಿಗಳ ನೆಚ್ಚಿನ ಮಾಹಿ, ಹೆಲಿಕಾಪ್ಟರ್​ ಶಾಟ್​ ಪರಿಚಯಿಸಿದ ಆಟಗಾರ ಮಹೇಂದ್ರ ಸಿಂಗ್ ಧೋನಿಗೆ ಇಂದು 39 ನೇ ಜನ್ಮ ದಿನದ ಸಂಭ್ರಮ. ಭಾರತ ಕ್ರಿಕೆಟ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾಹಿಯ ವೃತ್ತಿ ಜೀವನ ಹೇಗಿತ್ತು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

The tale of Mahendra Singh Dhoni
ಧೋನಿಯ ವೃತ್ತಿ ಜೀವನದ ಕಥೆ

By

Published : Jul 7, 2020, 11:16 AM IST

ಹೈದರಾಬಾದ್ :ಇಂದಿನ ದಿನ ಅಂದರೆ 1981 ಜುಲೈ 7 ರಂದು ಜನಿಸಿದ ಕ್ಯಾಪ್ಟನ್​ ಕೂಲ್ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್​ ತಂಡದ ನಾಯಕತ್ವ ವಹಿಸಿದ ಬಳಿಕ ಟೀಂ ಇಂಡಿಯಾ ಹಲವಾರು ಯಶಸ್ಸು ಗಳಿಸಿದೆ. ಪ್ರಸ್ತುತ ಪೀಳಿಗೆಯ ಎಲ್ಲ ಆಟಗಾರರಲ್ಲಿ ಹೊಸ ಭಾರತವನ್ನು ಉತ್ತೇಜಿಸಿದ ಮಾಹಿ, ಆಕ್ರಮಣಕಾರಿಯಲ್ಲದೇ, ದುರಹಂಕಾರವಿಲ್ಲದೇ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಧೋನಿ ಕ್ರಿಕೆಟ್​ ಕನಸು ಕಾಣುವ ಅದೆಷ್ಟೋ ಯುವ ಜನರಿಗೆ ರೋಲ್ ಮಾಡೆಲ್ ಮತ್ತು ಮಿನುಗುವ ತಾರೆಯಾಗಿ ಕಂಡಿದ್ದಾರೆ.

2013 ರ ಚಾಂಫಿಯನ್ಸ್ ಟ್ರೋಫಿ

ಧೋನಿ ನಾಯಕತ್ವದಲ್ಲಿ ಭಾರತವು ಎಲ್ಲಾ ಸ್ವರೂಪಗಳಲ್ಲಿ ಅಗ್ರ ಪ್ರಶಸ್ತಿ ಗೆದ್ದಿದೆ. ಡಿಸೆಂಬರ್ 2009 ರಿಂದ 18 ತಿಂಗಳುಗಳವರೆಗೆ ನಂ .1 ಟೆಸ್ಟ್ ಶ್ರೇಯಾಂಕ, 2011 ರಲ್ಲಿ 50 ಓವರ್‌ಗಳ ವಿಶ್ವಕಪ್ ಮತ್ತು 2007 ರಲ್ಲಿ ಟಿ -20 ವಿಶ್ವ ಕಪ್​ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಪಡೆದುಕೊಂಡಿದೆ.

2011 ರ ಏಕ ದಿನ ವಿಶ್ವಕಪ್ ಜಯ

ಇಂದು ಹಲವಾರು ಜನರಿಗೆ ನೆಚ್ಚಿನ ಕ್ರಿಕೆಟರ್​ ಆಗಿರುವ ಧೋನಿ 2004 ರಲ್ಲಿ ನೈರೋಬಿಯಾದಲ್ಲಿ ನಡೆದ 50 ಓವರ್​ಗಳ ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡದ ಪರ ಎರಡು ಶತಕಗಳನ್ನು ಹೊಡೆಯುವವರೆಗೆ ಕ್ರಿಕೆಟ್​ ಜಗತ್ತಿಗೆ ಪರಿಚಯವಾಗಿರದ ಮುಖವಾಗಿತ್ತು. ಆ ಸಮಯದಲ್ಲಿ ಟೀಂ ಇಂಡಿಯಾ ಸೂಕ್ತವಾದ ವಿಕೆಟ್​ ಕೀಪರ್​ ಕಮ್ ಬ್ಯಾಟ್ಸ್​ಮನ್​ಗಾಗಿ ಹಡುಕಾಟ ನಡೆಸುತ್ತಿದ್ದು, ಈ ವೇಳೆ, ಗಂಗೂಲಿ ಸಾರಥ್ಯದ ತಂಡದಲ್ಲಿ ವಿಕೆಟ್​ ಕೀಪರ್​ ಆಗಿ ಧೋನಿ ಸ್ಥಾನ ಪಡೆಯುತ್ತಾರೆ.

2007 ರ ಟಿ20 ವಿಶ್ವ ಕಪ್ ಜಯ

ಧೋನಿಯ ಪ್ರಾರಂಭವು ಐತಿಹಾಸಿಕವಾಗಿತ್ತು. 2005 ರಲ್ಲಿ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಪರದಾಡಿದ ಮಾಹಿ ನಾಲ್ಕನೆ ಪಂದ್ಯದಲ್ಲಿ 148 ರನ್​ ಗಳಿಸುವ ಮೂಲಕ ಇಡೀ ವಿಶ್ವಕ್ಕೆ ಪರಿಚಯವಾದರು. ಬಳಿಕ ಗಂಗೂಲಿ ತಮ್ಮ 3 ನೇ ಸ್ಥಾನದ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿ ಧೋನಿಗೆ ಸಾಮರ್ಥ್ಯ ತೋರಿಸಲು ಅವಕಾಶ ಮಾಡಿಕೊಟ್ಟರು. 2005 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 183 ರನ್​ ಹೊಡೆಯುವ ಮೂಲಕ ಇಡೀ ವಿಶ್ವಕ್ಕೆ ಮಾಹಿ "ಹೆಲಿಕಾಪ್ಟರ್​ ಶಾಟ್"​ ಪರಿಚಯಿಸಿದರು.

ಧೋನಿ ತಂಡದಲ್ಲಿ ತೋರಿದ ಉತ್ತಮ ಪ್ರದರ್ಶನ ಮತ್ತು ಅವರ ನಾಯಕತ್ವ ಕೌಶಲ್ಯವನ್ನು ಗುರುತಿಸಿದ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಟಿ -20 ವಿಶ್ವ ಕಪ್​ ತಂಡದ ನಾಯಕತ್ವಕ್ಕೆ ಶಿಫಾರಸು ಮಾಡುತ್ತಾರೆ.

2007 ರಲ್ಲಿ ನಡೆದ ಐಸಿಸಿ ಟಿ- 20 ವಿಶ್ವಕಪ್​ ಪಂದ್ಯದಲ್ಲಿ ಧೋನಿ ನಾಯಕತ್ವದ ಯುವಕರ ತಂಡ, ಟಿ 20 ವಿಶ್ವ ಕಪ್ ಟ್ರೋಫಿ​ ಮುಡಿಗೇರಿಸಿಕೊಳ್ಳುವ ಮೂಲಕ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿತು. ಈ ಮೂಲಕ ಧೋನಿ ನಾಯಕತ್ವದ ಸಾಮರ್ಥ್ಯವನ್ನು ಜಗತ್ತು ಕೊಂಡಾಡಿತು. ಅಷ್ಟೇ ಅಲ್ಲದೇ ಧೋನಿಗೆ "ಕ್ಯಾಪ್ಟನ್​ ಕೂಲ್" ಎಂಬ ಬಿರುದು ಸಿಕ್ಕಿತು.

ರಾಹುಲ್ ದ್ರಾವಿಡ್ ನಾಯಕತ್ವ ಹುದ್ದೆ ತ್ಯಜಿಸಿದ ನಂತರ ಮಾಹಿ ಏಕ ದಿನ ನಾಯಕರಾದರು ಮತ್ತು ಅಂತಿಮವಾಗಿ ಅನಿಲ್ ಕುಂಬ್ಳೆ ನಿವೃತ್ತರಾದ ನಂತರ ಪೂರ್ಣ ಸಮಯದ ಟೆಸ್ಟ್ ನಾಯಕತ್ವ ವಹಿಸಿಕೊಂಡರು.

ಧೋನಿ ಟೆಸ್ಟ್​​ ನಾಯಕತ್ವ ವಹಿಸಿದ ಬಳಿಕ ಭಾರತವು ಸಾಲು ಸಾಲು ಟೆಸ್ಟ್​ ಸರಣಿಯನ್ನು ಗೆದ್ದು ಬೀಗಿತು. ಇಂಗ್ಲೆಂಡ್​ 2008, ನ್ಯೂಜಿಲ್ಯಾಂಡ್​​​ 2009, ಶ್ರೀಲಂಕಾ 2009 ಟೆಸ್ಟ್​ ಸರಣಿಗಳನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿತು. ಈ ಮೂಲಕ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿತು. ಧೋನಿ ನಾಯಕತ್ವದಲ್ಲಿ ಭಾರತ ಕೇವಲ ಎರಡು ಟೆಸ್ಟ್​ ಮ್ಯಾಚ್​ ಸೋತಿದೆ.

ಮಾಹಿ ವೃತ್ತಿ ಜೀವನದಲ್ಲಿ ಅತೀ ದೊಡ್ಡ ಸಾಧನೆ ಎಂದರೆ 2011 ರಲ್ಲಿ ವಿಶ್ವ ಕಪ್​ ಗೆದ್ದಿದ್ದು, ಇದು ಭಾರತ 28 ವರ್ಷಗಳ ನಂತರ ಗೆದ್ದ ವಿಶ್ವ ಕಪ್​ ಆಗಿತ್ತು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಧೋನಿ ಔಟ್​ ಆಗದೇ 91 ರನ್ ಗಳಿಸಿದರು. ಈ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ತಂಡವು 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮುಂದುವರೆಸಿತು. ಟಿ -20 ವಿಶ್ವಕಪ್​ 50 ಓವರ್​ ಗಳ ವಿಶ್ವಕಪ್​ ಮತ್ತು ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಮಾಹಿ ಪಾತ್ರರಾದರು.

2014 ರಲ್ಲಿ ರಾಂಚಿಯಲ್ಲಿ ನಡೆದ ವರ್ಲ್​ ಚಾಂಪಿಯನ್ಸ್​ ಟ್ರೋಫಿ ಪಂದ್ಯದಲ್ಲಿ ಫೈನಲ್​ಗೆ ಭಾರತ ಲಗ್ಗೆಯಿಟ್ಟರೂ ಕೊನೆಗೆ ಶ್ರೀಲಂಕಾ ವಿರುದ್ಧ ಸೋಲಬೇಕಾಯಿತು. 2015 ರ ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೆ ಹೋದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತಿತು.

2014 ಡಿಸೆಂಬರ್​ 30 ರಂದು ಎಂಸಿಜಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಕೊನೆಗೊಳಿಸಿದ ಧೋನಿ, ಹೆಚ್ಚಿನ ಒತ್ತಡದ ಕಾರಣ ನೀಡಿ ಟೆಸ್ಟ್​ ನಾಯಕತ್ವದಿಂದ ನಿವೃತ್ತಿ ಘೋಷಿಸಿದರು. ಆ ಬಳಿಕ ಟೀಂ ಇಂಡಿಯಾ ನಾಯಕತ್ವವನ್ನು ವಿರಾಟ್​ ಕೊಹ್ಲಿ ಹೆಗಲಿಗೆ ಹಾಕಲಾಯಿತು.

ABOUT THE AUTHOR

...view details