ಕರ್ನಾಟಕ

karnataka

ETV Bharat / sports

ಪಾನಿಪುರಿ ಮಾರಾಟದಿಂದ ವಿಶ್ವಕಪ್ ಶತಕದವರೆಗೆ: ಯಶಸ್ವಿ ಜೈಸ್ವಾಲ್ ಯಶಸ್ಸಿನ ಕಥೆ ಇದು! - ಪಾಕಿಸ್ತಾನ್

ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ ಯಶಸ್ವಿ ಅವರ ಅಜೇಯ ಶತಕ ಭಾರತವನ್ನು 10 ವಿಕೆಟ್​ಗಳ ಅಂತರದಲ್ಲಿ ಗೆಲ್ಲಿಸಿದ್ದಲ್ಲದೇ, ಟೂರ್ನಿಯಲ್ಲಿ ಅವರ ಒಟ್ಟು ಮೊತ್ತ 312 ರನ್​ಗಳಿಗೆ ಏರಿಕೆ ಮಾಡಿಕೊಂಡಿದ್ದಾರೆ.

yashaswi jaiswal
yashaswi jaiswal

By

Published : Feb 6, 2020, 10:47 AM IST

Updated : Feb 6, 2020, 11:39 AM IST

ಭಾರತದಲ್ಲಿ ಕ್ರಿಕೆಟ್ ಕ್ರೇಜ್​​ ತುಸು ಜಾಸ್ತಿನೇ ಇದೆ. ಬ್ಯಾಟ್ ಕೈಯಲ್ಲಿ ಹಿಡಿದುಕೊಂಡ ಪ್ರತಿಯೊಂದು ಮಗು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಬಯಸುತ್ತದೆ. ಯಶಸ್ವಿ ಜೈಸ್ವಾಲ್ ಪ್ರಕರಣವೂ ಭಿನ್ನವಾಗಿರಲಿಲ್ಲ. ಮುಂಬೈ ಬೀದಿಗಳಲ್ಲಿ ಪಾನಿಪುರಿ ಮಾರಾಟ ಮಾಡುವುದರಿಂದ ಹಿಡಿದು ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯ ಗೆಲ್ಲಿಸುವ ಶತಕಗಳಿಸುವವರೆಗೆ ಯಶಸ್ವಿ ಅವರ ಯಶಸ್ಸಿನ ಕಥೆ ಕಠಿಣ ಪರಿಶ್ರಮಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ ಯಶಸ್ವಿ ಅವರ ಅಜೇಯ ಶತಕ ಭಾರತವನ್ನು 10 ವಿಕೆಟ್​ಗಳ ಅಂತರದಲ್ಲಿ ಗೆಲ್ಲಿಸಿದ ಜೊತೆಗೆ, ಟೂರ್ನಿಯಲ್ಲಿ ಅವರ ಒಟ್ಟು ಮೊತ್ತವನ್ನು 312 ರನ್‌ಗಳಿಗೆ ಕೊಂಡೊಯ್ದು ಅಗ್ರ ಸ್ಕೋರರ್ ಎನಿಸಿತು.

ಟೂರ್ನಿಯಲ್ಲಿ 312 ರನ್ ಗಳಿಸಿದ ಜೈಸ್ವಾಲ್

ಜೈಸ್ವಾಲ್ 113 ಎಸೆತಗಳಲ್ಲಿ 105 ರನ್ ಗಳಿಸಿದ್ದರು. ಇದು ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್​ಗಳನ್ನ ಒಳಗೊಂಡಿತ್ತು.

113 ಎಸೆತಗಳಲ್ಲಿ 105 ರನ್ ಗಳಿಸಿದ ಯಶಸ್ವಿ

"ನಾನು ಕ್ರಿಕೆಟ್​​ ಅನ್ನು ಪ್ರೀತಿಸುತ್ತೇನೆ ಮತ್ತು ಆಡುವುದರಿಂದ ನನಗೆ ಅಪಾರ ಸಂತೋಷ ಸಿಗುತ್ತದೆ. ನಾನು ಸಚಿನ್ ಸರ್ ಬ್ಯಾಟಿಂಗ್ ನೋಡುತ್ತಿದ್ದೆ ಮತ್ತು ಆ ಸಮಯದಿಂದ ನನಗೆ ಮುಂಬೈಯಲ್ಲಿರಲು ಮತ್ತು ಮುಂಬೈಯನ್ನು ಪ್ರತಿನಿಧಿಸಲು ಬಯಸಿದೆ" ಎಂದು ಜೈಸ್ವಾಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಸಿಸಿಗೆ ತಿಳಿಸಿದ್ದರು.

"ನಾನು ನನ್ನ ತಂದೆಯೊಂದಿಗೆ ಇಲ್ಲಿಗೆ (ಮುಂಬೈ) ಬಂದಾಗ, ನಾನು ಆಜಾದ್ ಮೈದಾನಕ್ಕೆ ಭೇಟಿ ನೀಡುತ್ತಿದ್ದೆ. ಅಲ್ಲಿಯೇ ಕ್ರಿಕೆಟ್ ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಆದರೆ ನನ್ನ ತಂದೆ 'ಮನೆಗೆ ಹಿಂದಿರುಗೋಣ (ಉತ್ತರ ಪ್ರದೇಶ) ಎಂದು ಹೇಳಿದರು. ಆದರೆ, ನಾನು ಇಲ್ಲಿಯೇ ಇದ್ದು ಮುಂಬೈ ಪರ ಆಡುತ್ತೇನೆ ಎಂದು ಹೇಳಿದ್ದೆ.

"ಆ ಸಮಯದಲ್ಲಿ ನನ್ನ ಕುಟುಂಬದಿಂದ ಹಣಕಾಸಿನ ನೆರವು ಸಿಕ್ಕಿರಲಿಲ್ಲ. ಹಾಗಾಗಿ ನಾನು ಸಂಜೆ ಪಾನಿಪುರಿ ಮಾರಿ ಸ್ವಲ್ಪ ಹಣ ಸಂಪಾದಿಸುತ್ತಿದ್ದೆ." ಅಂತಾರೆ ಜೈಸ್ವಾಲ್​.

"ನನಗೆ ಆಹಾರ ಖರೀದಿಸಲು ಹಣವಿರಲಿಲ್ಲ ಮತ್ತು ಉಳಿಯಲು ಸ್ಥಳವೂ ಇರಲಿಲ್ಲ. ಆದಾಗ್ಯೂ, ಸರ್ ಕೇವಲ ಕ್ರಿಕೆಟ್‌ನತ್ತ ಗಮನಹರಿಸಲು ಹೇಳಿದ್ದರು ಮತ್ತು ಅವರು ಉಳಿದಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಿದರು. 2019 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡವನ್ನ ಪ್ರತಿನಿಧಿಸಿದ್ದೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಎಂಬ ದಾಖಲೆಯನ್ನು ಸೃಷ್ಟಿಸಿದೆ "ಎಂಬ ಅಂಶದ ಬಗ್ಗೆ ಜೈಸ್ವಾಲ್​ ಹೇಳಿಕೊಂಡರು.

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ಮುಂಬೈ ಪರ 154 ಎಸೆತಗಳಲ್ಲಿ 203 ರನ್ ಗಳಿಸಿದ್ದರು. ಈ ಸಾಧನೆಯ ಬಳಿಕ ಅವರು ಭಾರತದ ಅಂಡರ್-19 ಕ್ರಿಕೆಟ್ ತಂಡಕ್ಕೆ ಸೇರಿದ್ದು ಅಚ್ಚರಿಯೇನಲ್ಲ.

ಭಾನುವಾರ ನಡೆಯಲಿರುವ ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ನ್ಯೂಜಿಲ್ಯಾಂಡ್​ ಅಥವಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ. ಮುಂಬರುವ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಈಗಾಗಲೇ ಯಶಸ್ವಿಯನ್ನು 2.4 ಕೋಟಿ ರೂಪಾಯಿಗೆ ಖರೀದಿಸಿದೆ.

Last Updated : Feb 6, 2020, 11:39 AM IST

ABOUT THE AUTHOR

...view details