ಕರ್ನಾಟಕ

karnataka

ವಿಶ್ವಕಪ್​ನಲ್ಲಿ ಈತನನ್ನು ಕೈಬಿಟ್ಟಿದ್ದು ನಾವು ಮಾಡಿದ ದೊಡ್ಡ ತಪ್ಪು: ಆಯ್ಕೆ ಸಮಿತಿ ಮಾಜಿ ಸದಸ್ಯ

By

Published : Nov 21, 2020, 5:57 PM IST

2020ರ ವಿಶ್ವಕಪ್​ಗೆ ಆಯ್ಕೆಯಾಗದ ಬೇಸರದಲ್ಲಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಆದರೆ ನಂತರ ನಿವೃತ್ತಿಯಿಂದ ಹೊರ ಬಂದು ಮತ್ತೆ ವೃತ್ತಿಪರ ಕ್ರಿಕೆಟ್​ನಲ್ಲಿ ಮುಂದುವರೆಯುತ್ತಿದ್ದಾರೆ.

2019 ವಿಶ್ವಕಪ್​ ತಂಡ

ಮುಂಬೈ: 2019ರ ಏಕದಿನ ವಿಶ್ವಕಪ್​ನಲ್ಲಿ ಅಂಬಾಟಿ ರಾಯುಡು ಅವರನ್ನು ಆಯ್ಕೆ ಮಾಡದೇ ನಾವು ತಪ್ಪು ಮಾಡಿದೆವು ಎಂದು ಆಯ್ಕೆ ಸಮಿತಿ ಮಾಜಿ ಸದಸ್ಯ ದೇವಾಂಗ್ ಗಾಂಧಿ ಹೇಳಿದ್ದಾರೆ.

ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಭಾರತ ಲೀಗ್​ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋತು ನಿರಾಸೆಯನುಭವಿಸಿತ್ತು. ತಂಡದ ಆಯ್ಕೆ ಸಂದರ್ಭದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದ ಅಂಬಾಟಿ ರಾಯುಡು ಅವರನ್ನು ಕಡೆಗಣಿಸಿ ಆಲ್​ರೌಂಡರ್​ ವಿಜಯ್ ಶಂಕರ್​ ಅವರನ್ನು ಆಯ್ಕೆ ಮಾಡಿ ಮ್ಯಾನೇಜ್​ಮೆಂಟ್​ ತಪ್ಪು ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಹಲವಾರು ಕ್ರಿಕೆಟಿಗರು, ಅಭಿಮಾನಿಗಳು ಕಿಡಿಕಾರಿದ್ದರು.

ಅಂಬಾಟಿ ರಾಯಡು

"ಹೌದು, ಅದೊಂದು ದೊಡ್ಡ ತಪ್ಪು, ಆದರೆ ನಾವೂ ಕೂಡ ಮನುಷ್ಯರೇ. ಆ ಸಮಯದಲ್ಲಿ ನಾವು ತಂಡ ಉತ್ತಮ ಸಂಯೋಜನೆ ಹೊಂದಿದೆ ಎಂದು ಭಾವಿಸಿದ್ದೆವು. ರಾಯುಡು ತಂಡದಲ್ಲಿದ್ದರೆ ತಂಡಕ್ಕೆ ಸಹಾಯವಾಗುತ್ತಿತ್ತು ಎಂದು ನಮಗೆ ನಿಧಾನವಾಗಿ ಮನವರಿಕೆಯಾಯಿತು. ಆದರೆ ವಿಶ್ವಕಪ್​ನಲ್ಲಿ ಭಾರತ ತಂಡ ಒಂದೇ ಒಂದು ಕೆಟ್ಟ ದಿನವನ್ನು(ಸೆಮಿಫೈನಲ್​) ಕಂಡಿತ್ತು. ಆ ಸಂದರ್ಭದಲ್ಲಿ ರಾಯುಡು ಅನುಪಸ್ಥಿತಿ ದೊಡ್ಡ ಚರ್ಚೆಗೆ ಗ್ರಾಸವಾಗುವಂತೆ ಮಾಡಿತು. ಅದೊಂದು ಪಂದ್ಯವನ್ನು ಹೊರತುಪಡಿಸಿದರೆ ಭಾರತ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ರಾಯುಡು ಅವರ ಕೋಪ ಮತ್ತು ಪ್ರತಿಕ್ರಿಯೆ ನ್ಯಾಯಯುತವಾದದ್ದು ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ" ಎಂದು ದೇವಾಂಗ್ ಗಾಂಧಿ ಒಪ್ಪಿಕೊಂಡಿದ್ದಾರೆ.

2020ರ ವಿಶ್ವಕಪ್​ಗೆ ಆಯ್ಕೆಯಾಗದ ಬೇಸರದಲ್ಲಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ತಮ್ಮ ಅಸಮಾಧಾನ ಹೊರೆ ಹಾಕಿದ್ದರು. ಆದರೆ ನಂತರ ನಿವೃತ್ತಿಯಿಂದ ಹೊರ ಬಂದು ಮತ್ತೆ ವೃತ್ತಿಪರ ಕ್ರಿಕೆಟ್​ನಲ್ಲಿ ಮುಂದುವರೆಯುತ್ತಿದ್ದಾರೆ.

ABOUT THE AUTHOR

...view details