ನಾಸಿಕ್ :ಮಹಾರಾಷ್ಟ್ರದ ಮಾಜಿ ರಣಜಿ ಕ್ರಿಕೆಟಿಗ ಶೇಖರ್ ಗವಾಲಿ ಚಾರಣಕ್ಕೆಂದು ತೆರಳಿದ್ದ ವೇಳೆ ಆಯತಪ್ಪಿ 250 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಅವರು ಮಹಾರಾಷ್ಟ್ರ ಅಂಡರ್ 23 ತಂಡದ ಫಿಟ್ನೆಸ್ ತರಬೇತುದಾರರಾಗಿ ಕಾರ್ಯನಿರ್ಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಪರ ಎರಡು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ಗವಾಲಿ ಮಂಗಳವಾರ ಸಂಜೆ ಸ್ನೇಹಿತರೊಂದಿಗೆ ನಾಸಿಕ್‌ನ ಇಗತ್‌ಪುರಿ ಗಿರಿಧಾಮದ ಪಶ್ಚಿಮ ಘಾಟ್ ಪರ್ವತಕ್ಕೆ ಚಾರಣಕ್ಕೆ ತೆರಳಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.