ಕರಾಚಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದುಗೊಂಡಿರುವ ಕುರಿತುಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಆರ್ಟಿಕಲ್ 370 ರದ್ದು: ಭಾರತದ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್! - ಶೋಯೆಬ್ ಅಖ್ತರ್
ಆರ್ಟಿಕಲ್ 370 ರದ್ದು ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮಾತನಾಡಿದ್ದು, ಕೇಂದ್ರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮೆಲ್ಲರಿಗೂ ಈದ್ ಮುಬಾರಕ್... ಕಾಶ್ಮೀರ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅಖ್ತರ್,ನೀವೂ ತ್ಯಾಗ ಮಾಡಿದ್ದೀರಿ, ನಿಮ್ಮ ಹೋರಾಟಕ್ಕೆ ನಾವು ಸಾಥ್ ನೀಡುತ್ತೇವೆ. ಯಾವ ಉದ್ದೇಶವನ್ನಿಟ್ಟುಕೊಂಡು ನೀವು ಜೀವನ ನಡೆಸುತ್ತಿದ್ದೀರಿ? ಎಂದು ಅಖ್ತರ್ ಕೇಳಿದ್ದಾರೆ.
ಭಾರತದ ನಡೆ ಖಂಡಿಸಿರುವ ಪಾಕ್ ಸರ್ಕಾರ ಈಗಾಗಲೇ ದ್ವಿಪಕ್ಷೀಯ ವ್ಯವಹಾರ ಕಡಿದುಕೊಂಡಿದ್ದು, ಉಭಯ ದೇಶಗಳ ನಡುವೆ ಸಂಚಾರ ಮಾಡುತ್ತಿದ್ದ ಸಂಜೋತಾ ಎಕ್ಸ್ಪ್ರೆಸ್, ದೆಹಲಿ-ಲಾಹೋರ್ ಬಸ್ ಸೇವೆ ಕೂಡ ಸ್ಥಗಿತಗೊಳಿಸಿದೆ.