ಕರಾಚಿ: ಪಾಕಿಸ್ತಾನ ಮಹಿಳಾ ತಂಡದ ಮಾಜಿ ನಾಯಕಿ ಸನಾ ಮಿರ್ಗೆ ಕೊರೊನಾ ಸೋಂಕು ತಗುಲಿದೆ. ಅವರು ಪಿಸಿಬಿ ಆಯೋಜನೆ ಮಾಡುವ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯನಿರ್ಹಸುವ ವೇಳೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಸನಾ ಮಿರ್ ಪ್ರಥಮ ದರ್ಜೆ ಟೂರ್ನಿಯಾದ ಕ್ವಾಯ್ದ್ -ಎ -ಅಜಮ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪಂದ್ಯದ ವೀಕ್ಷಕ ವಿವರಣೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ಪಾಸಿಟಿವ್ ಬಂದಿರುವುದರಿಂದ ಅವರನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದ್ದು, ವೀಕ್ಷಕ ವಿವರಣೆಗಾರರ ತಂಡದಿಂದ ಹೊರಗಿಡಲಾಗಿದೆ.
ಸನಾ ಮೀರ್ ಕೊರೊನಾ ಸೋಂಕು ತಗುಲಿರುವ ಬೆನ್ನಲ್ಲೇ ಮುನ್ನಚ್ಚೆರಿಕೆ ಕ್ರಮವಾಗಿ ಅವರರೊಂದಿಗೆ ಕಾಮೆಂಟರಿ ಮಾಡುತ್ತಿದ್ದ ಇತರರನ್ನು ಐಸೋಲೇಶನ್ ಮಾಡಲಾಗಿದೆ. ವಿಷಾದನೀಯ ವಿಷಯವೆಂದರೆ ಸನಾ ಇಂದೇ 35ನೇ ವಸಂತಕ್ಕೆ ಕಾಲಿಟ್ಟಿದ್ದರು. ಆದರೆ ಹುಟ್ಟುಹಬ್ಬದ ಸಂಭ್ರಮದ ಬದಲು ನಾಲ್ಕು ಕೋಣೆಗೆ ಸೇರುವಂತಾಗಿದೆ.
35 ವರ್ಷದ ಸನಾ ಮಿರ್ ಪಾಕಿಸ್ತಾನ ಪರ 226 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅವರು 120 ಏಕದಿನ ಪಂದ್ಯಗಳಲ್ಲಿ 1630 ರನ್ ಹಾಗೂ 151 ವಿಕೆಟ್ ಮತ್ತು 106 ಟಿ-20 ಪಂದ್ಯಗಳಲ್ಲಿ 802 ರನ್ ಮತ್ತು 89 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ನ್ಯೂಜಿಲ್ಯಾಂಡ್ನಲ್ಲಿ ಪಾಕಿಸ್ತಾನ ತಂಡ ಶಾಲಾ ಹಂತದ ಕ್ರಿಕೆಟ್ ಆಡುತ್ತಿದೆ: ಪಿಸಿಬಿ ವಿರುದ್ಧ ಅಖ್ತರ್ ಕಿಡಿ