ಕರ್ನಾಟಕ

karnataka

By

Published : Dec 29, 2019, 7:42 PM IST

ETV Bharat / sports

ಮಗಳು ಆರತಿ ಮಾಡುವುದನ್ನು ನೋಡಿ ಟಿವಿ ಒಡೆದುಹಾಕಿದ್ರಂತೆ ಅಫ್ರಿದಿ... ಪಾಕ್​ ಕ್ರಿಕೆಟರ್​ ವಿರುದ್ಧ ಆಕ್ರೋಶ

ಪಾಕಿಸ್ತಾನದ ಮಾಜಿ ಕ್ರಿಕೆಟ್​ ನಾಯಕ ಶಾಹಿದ್ ಅಫ್ರಿದಿ ಯಾವಾಗಲೂ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಹಿಂದೂ ಆಚರಣೆಯ ಕುರಿತಂತೆ ವಿವಾದಾತ್ಮಕ ಹೇಳಿಕೆವೊಂದನ್ನು ನೀಡಿದ್ದಾರೆ.

Shahid Afridi
Shahid Afridi

ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಕ್ರಿಕೆಟ್​ ನಾಯಕ ಶಾಹಿದ್ ಅಫ್ರಿದಿ ಯಾವಾಗಲೂ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಹಿಂದೂ ಆಚರಣೆಯ ಕುರಿತಂತೆ ವಿವಾದಾತ್ಮಕ ಹೇಳಿಕೆವೊಂದನ್ನು ನೀಡಿದ್ದಾರೆ.

ಹೌದು, ಪಾಕಿಸ್ತಾನದ ಟಿವಿ ಚಾನೆಲ್‌ವೊಂದರಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ರೀತಿಯಾ ಹೇಳಿಕೆಯೊಂದನ್ನು ನೀಡಿದ್ದಾರೆ. ನಿರೂಪಕಿ ನಿಡಾ ಯಾಸಿರ್ ಕೇಳಿದ ಪ್ರಶ್ನೆಗೆಯೊಂದಕ್ಕೆ ಉತ್ತರಿಸಿದ ಅಫ್ರಿದಿ, ನಾನು ಹಿಂದೂ ಆಚರಣೆಯನ್ನು ನಿರ್ದಾಕ್ಷಿಣ್ಯವಾಗಿ ಗೇಲಿ ಮಾಡುತ್ತಾನೆ. ತನ್ನ ಮಗಳು ಆರತಿ ಮಾಡುವುದನ್ನು ನೋಡಿ ನಾನು ಟೆಲಿವಿಷನ್ ಸೆಟ್ ​ಅನ್ನೇ ಮುರಿದು ಹಾಕಿದೆ. ಇಂತಹ ಆಚರಣೆಯನ್ನು ನಾನು ಇಷ್ಟಪಡುವುದಿಲ್ಲ ಎಂದು ಖಡಕ್​ ಆಗಿ ಹೇಳಿದ್ದಾರೆ.

ಇನ್ನೂ ಈ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಹ ಅಫ್ರಿದಿ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರರು ಶೇರ್​ ಮಾಡಿದ್ದು, ಶಾಹಿದ್ ಅಫ್ರಿದಿ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details