ಕರ್ನಾಟಕ

karnataka

ETV Bharat / sports

ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ಗೆ ಕೊರೊನಾ​​​​! - Zafar Sarfraz Pakistanand

38 ವರ್ಷದ ತೌಫಿಕ್​ ಕೊರೊನಾ ಸೋಂಕಿಗೆ ಒಳಗಾಗಿರುವ ವಿಶ್ವದ ನಾಲ್ಕನೇ ಕ್ರಿಕೆಟಿಗ ಹಾಗೂ ಪಾಕಿಸ್ತಾನದ 2ನೇ ಕ್ರಿಕೆಟಿಗರಾಗಿದ್ದಾರೆ.

ತೌಫಿಕ್​ ಉಮರ್​
ತೌಫಿಕ್​ ಉಮರ್​

By

Published : May 25, 2020, 10:58 AM IST

ಲಾಹೋರ್‌:ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ತೌಫಿಕ್‌ ಉಮರ್​ಗೆ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಕ್ರಿಕೆಟ್​ ಪಾಕಿಸ್ತಾನ ವೆಬ್​ಸೈಟ್ ವರದಿ ಮಾಡಿದೆ.

ವಿಶ್ವವನ್ನೇ ಭೀತಿಗೀಡು ಮಾಡಿರುವ ಮಹಾಮಾರಿ ಕೊರೊನಾ ಕ್ರಿಕೆಟ್​ ಜಗತ್ತಿಗೂ ವ್ಯಾಪಿಸಿದೆ. ಈಗಾಗಲೇ ಹಲವು ಕ್ರಿಕೆಟ್​ ಟೂರ್ನಮೆಂಟ್​ಗಳು ಕೊರೊನಾ ಭೀತಿಯಿಂದ ರದ್ದಾಗಿವೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಫಿಕ್‌ ಉಮರ್​ಗೂ‌ ಕೊರೊನಾ​ ಸೋಂಕು ತಗುಲಿದೆ. ಮನೆಯಲ್ಲಿ ಹೋಮ್​ ಕ್ವಾರಂಟೈನ್​ನಲ್ಲಿದ್ದ ಅವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಪಾಸಿಟಿವ್​ ವರದಿ ಬಂದಿದೆ.

ತೌಫಿಕ್ ಉಮರ್​

38 ವರ್ಷದ ತೌಫಿಕ್​ ಕೊರೊನಾ ಸೋಂಕಿಗೆ ಒಳಗಾಗಿರುವ ವಿಶ್ವದ ನಾಲ್ಕನೇ ಕ್ರಿಕೆಟಿಗ ಹಾಗೂ ಪಾಕಿಸ್ತಾನದ 2ನೇ ಕ್ರಿಕೆಟಿಗರಾಗಿದ್ದಾರೆ. ಈ ಮೊದಲು ಪಾಕ್​ನ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್​ ಸರ್ಫರಾಜ್​ ಕೊರೊನಾ ತಗುಲಿತ್ತು. ಸ್ಕಾಟ್ಲೆಂಡ್​ನ ಸ್ಪಿನ್ನರ್‌ ಮಜೀದ್‌ ಹಕ್‌ ಮತ್ತು ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟಿಗ ಸೊಲೊ ಎನ್‌ಕ್ವೆನಿಗೂ ಕೊರೊನಾ ಸೋಂಕು ತಗುಲಿತ್ತು.

‘ಕಳೆದ ರಾತ್ರಿ ಅನಾರೋಗ್ಯದಿಂದ್ದೇನೆ ಎಂದೆನಿಸಿತ್ತು. ಆದ್ದರಿಂದ ನಾನೇ ಪರೀಕ್ಷೆಗೆ ಒಳಗಾದಾಗ ಪಾಸಿಟಿವ್‌ ವರದಿ ಬಂದಿದೆ. ಆದರೆ ನನ್ನ ಲಕ್ಷಣಗಳು ಗಂಭೀರವಾಗಿಲ್ಲ ’ ಎಂದು ತೌಫಿಕ್‌ ಉಮರ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

2000ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ತೌಫಿಕ್‌ ಉಮರ್‌ 2003ರ ವಿಶ್ವಕಪ್‌ ತಂಡದಲ್ಲೂ ಅವಕಾಶ ಪಡೆದಿದ್ದರು. ಎಡಗೈ ಆಟಗಾರನಾಗಿದ್ದ ತೌಫಿಕ್‌ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಇವರು 44 ಟೆಸ್ಟ್‌ಗಳಿಂದ 7 ಶತಕ, 14 ಅರ್ಧಶತಕಗಳ ಸಹಿತ 2,963 ರನ್‌ , 12 ಏಕದಿನ ಪಂದ್ಯಗಳಿಂದ 504 ರನ್​ ಪೇರಿಸಿದ್ದಾರೆ.

ABOUT THE AUTHOR

...view details