ಲಾಹೋರ್:ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಬಹುಪಾಲು ಪಾಕ್ ಕ್ರಿಕೆಟಿಗರು ತೆಗೆಳುವುದರಲ್ಲೇ ಕಾಲ ಕಳೆಯುವಾಗ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡೆಯದಿರಲು ಮೋದಿ ಕಾರಣವೆಂದು ಸದಾ ಆರೋಪಿಸುವ ಪಾಕಿಸ್ತಾನ ಕ್ರಿಕೆಟಿಗರ ನಡುವೆ ಮೋದಿಯನ್ನು ಅಖ್ತರ್ ಈ ಒಂದು ಕಾರಣಕ್ಕೆ ಹೊಗಳಿದ್ದಾರೆ. ಕೊರೊನಾ ವೈರಸ್ ತಡೆಗೆ ಮೋದಿ ದೇಶದ ಆರ್ಥಿಕತೆ ಕುಸಿಯುತ್ತಿರುವುದನ್ನು ಲೆಕ್ಕಿಸದೇ ಲಾಕ್ಡೌನ್ ಹೇರುವ ಮೂಲಕ ದೇಶದ ನಾಗರಿಕರ ಜೀವಕ್ಕೆ ಮನ್ನಣೆ ನೀಡಿರುವುದಕ್ಕೆ ಅಖ್ತರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
" ನರೇಂದ್ರ ಮೋದಿ ಬಗ್ಗೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯವಿರಬಹುದು, ಆದರೆ, ಅವರು ಕೊರೊನಾ ವಿರುದ್ಧ ತೆಗೆದುಕೊಂಡಿರುವ ನಿರ್ಧಾರಗಳನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಲಾಕ್ಡೌನ್ನಿಂದ ಸಾಕಷ್ಟು ಆರ್ಥಿಕವಾಗಿ ನಷ್ಟವಾಗುವುದೆಂದು ತಿಳಿದಿದ್ದರೂ, ದೇಶದ ಜನರ ಪ್ರಾಣಕ್ಕೆ ಹೆಚ್ಚು ಹೊತ್ತು ನೀಡಿದ್ದಾರೆ. ಇದಕ್ಕೆ ಅವರಿಗೊಂದು ಸಲಾಮ್ " ಎಂದು ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಬೇಕು. ಇದರ ಬ್ರಾಡ್ಕಾಸ್ಟ್ನಿಂದ ಬರುವ ಹಣವನ್ನು ಸಮನಾಗಿ ಹಂಚಿಕೊಳ್ಳಬಹುದು ಎಂದು ಸಲಹೆ ನೀಡಿದ್ದರು. ಆದರೆ, ಈ ಸಲಹೆಯನ್ನು ನಯವಾಗಿ ತಿರಸ್ಕರಿಸಿದ್ದ 1983 ವಿಶ್ಚಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ನಮಗೆ ಕ್ರಿಕೆಟ್ ಆಡುವುದರಿಂದ ಬರುವ ದುಡ್ಡು ಭಾರತಕ್ಕೆ ಬೇಕಾಗಿಲ್ಲ ಎಂದಿದ್ದರು.
ಜೊತೆಗೆ ಗಡಿಯಲ್ಲಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸಿ, ಅದರಿಂದ ಉಳಿಯುವ ಹಣದಿಂದ ಆಸ್ಪತ್ರೆಗಳನ್ನು ನಿರ್ಮಿಸಿ, ಅದಕ್ಕೂ ಮಿಗಿಲಾಗಿ ಇಂತಹ ಸಂದರ್ಭದಲ್ಲಿ ಕ್ರಿಕೆಟ್ಗಿಂತ ಶಾಲಾ-ಕಾಲೇಜುಗಳ ಆರಂಭವೇ ಮುಖ್ಯ ಎಂದು ತಿರುಗೇಟು ನೀಡಿದ್ದರು.