ಕರ್ನಾಟಕ

karnataka

ETV Bharat / sports

80ರ ದಶಕದಲ್ಲಿ ನ್ಯೂಜಿಲ್ಯಾಂಡ್​ನ ಬ್ಯಾಟಿಂಗ್ ಅಸ್ತ್ರವಾಗಿದ್ದ ಜಾನ್​ ಎಫ್​ ರೀಡ್​ ನಿಧನ

ರೀಡ್​ ಕಿವೀಸ್​ ಪರ 19 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಇದರಲ್ಲಿ 6 ಶತಕ ಸಿಡಿಸಿದ್ದರು. ಅವರು 80ರ ದಶಕದಲ್ಲಿ ನ್ಯೂಜಿಲ್ಯಾಂಡ್​ ತಂಡ ಪ್ರಮುಖ ಬ್ಯಾಟ್ಸ್​ಮನ್​ ಆಗಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ 1985ರಲ್ಲಿ ಬ್ರಿಸ್ಬೇನ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶತಕ ಸಿಡಿಸಿ ಇನ್ನಿಂಗ್ಸ್​​ ಹಾಗೂ 41 ರನ್​ಗಳ ಐತಿಹಾಸಿಕ ಜಯ ಸಾಧಿಸಲು ನೆರವಾಗಿದ್ದರು.

ನ್ಯೂಜಿಲ್ಯಾಂಡ್​ನ ಮಾಜಿ ಕ್ರಿಕೆಟಿಗ ಜಾನ್​ ಎಫ್​ ರೀಡ್​ ನಿಧನ
ನ್ಯೂಜಿಲ್ಯಾಂಡ್​ನ ಮಾಜಿ ಕ್ರಿಕೆಟಿಗ ಜಾನ್​ ಎಫ್​ ರೀಡ್​ ನಿಧನ

By

Published : Dec 29, 2020, 5:52 PM IST

ವೆಲ್ಲಿಂಗ್ಟನ್​:ನ್ಯೂಜಿಲ್ಯಾಂಡ್​ ತಂಡದ ಮಾಜಿ ಬ್ಯಾಟ್ಸ್​ಮನ್​ ಜಾನ್ ಎಫ್​​ ರೀಡ್​ ತಮ್ಮ 64ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿ ಮಂಗಳವಾರ ತಿಳಿಸಿದೆ.

ರೀಡ್​ ಕಿವೀಸ್​ ಪರ 19 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಇದರಲ್ಲಿ 6 ಶತಕ ಸಿಡಿಸಿದ್ದರು. ಅವರು 80ರ ದಶಕದಲ್ಲಿ ನ್ಯೂಜಿಲ್ಯಾಂಡ್​ ತಂಡ ಪ್ರಮುಖ ಬ್ಯಾಟ್ಸ್​ಮನ್​ ಆಗಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ 1985ರಲ್ಲಿ ಬ್ರಿಸ್ಬೇನ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶತಕ ಸಿಡಿಸಿ ಇನ್ನಿಂಗ್ಸ್​​ ಹಾಗೂ 41 ರನ್​ಗಳ ಐತಿಹಾಸಿಕ ಜಯ ಸಾಧಿಸಲು ನೆರವಾಗಿದ್ದರು.

ಜಾನ್​ ಎಫ್​ ರೀಡ್​

ಅವರು ಆ ಪಂದ್ಯದಲ್ಲಿ ಮಾರ್ಟಿನ್ ಕ್ರೋವ್​(188) ಜೊತೆಗೆ 225 ರನ್​ಗಳ ಜೊತೆಯಾಟ ನಡೆಸಿ 553-7 ರನ್​ಗಳ ಬೃಹತ್ ಮೊತ್ತ ದಾಕಲಿಸಲು ನೆರವಾಗಿದ್ದರು. ಈ ಪಂದ್ಯದಲ್ಲಿ ಜಾನ್ ರೀಡ್​ 108 ರನ್​ಗಳಿಸಿದ್ದರು. ರಿಚರ್ಡ್​ ಹ್ಯಾಡ್ಲೀ ಮೊದಲ ಇನ್ನಿಂಗ್ಸ್​ನಲ್ಲಿ 9 ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ವಿಕೆಟ್​ ಪಡೆದು ಇನ್ನಿಂಗ್ಸ್ ಜಯಕ್ಕೆ ಕಾರಣರಾಗಿದ್ದರು.

1979ರಿಂದ 1986ರವರೆಗೆ ನ್ಯೂಜಿಲ್ಯಾಂಡ್ ತಂಡ ಪ್ರತಿನಿಧಿಸಿದ್ದ ಅವರು 46 ಸರಾಸರಿಯಲ್ಲಿ 1296 ರನ್​ಗಳಿಸಿದ್ದರು. ಇದೇ ಹೆಸರಿನಲ್ಲಿ ಪ್ರಸಿದ್ಧರಾಗಿದ್ದ ನ್ಯೂಜಿಲ್ಯಾಂಡ್​ ಮಾಜಿ ನಾಯಕ ಜಾನ್ ಆರ್​ ರೀಡ್​ ಅಕ್ಟೋಬರ್​ನಲ್ಲಿ ನಿಧನರಾಗಿದ್ದಾರೆ.

ABOUT THE AUTHOR

...view details