ಢಾಕಾ:ನ್ಯೂಜಿಲ್ಯಾಂಡ್ ಮಾಜಿ ನಾಯಕ ಹಾಗೂ ಬಾಂಗ್ಲಾದೇಶ ತಂಡದ ಸ್ಪಿನ್ ಬೌಲಿಂಗ್ ಸಲೆಹೆಗಾರನಾಗಿರುವ ಡೇನಿಯಲ್ ವೆಟ್ಟೋರಿ ತಮ್ಮ ವೇತನದ ಒಂದು ನಿರ್ದಿಷ್ಟ ಭಾಗವನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ನಲ್ಲಿ ಕಡಿಮೆ ವೇತನವಿರುವ ಸಿಬ್ಬಂದಿಗೆ ಹಂಚುವಂತೆ ಹೇಳುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ಗಾಗಿ 100 ದಿನಗಳವರೆಗೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಿಸಿತ್ತು. ಇದಕ್ಕಾಗಿ ದಿನಕ್ಕೆ 3571 ಯುಎಸ್ಡಿ(2.5 ಲಕ್ಷ ರೂ) ವೇತನ ನಿಗದಿ ಮಾಡಲಾಗಿತ್ತು. ಭಾರತದ ಸುನಿಲ್ ಜೋಷಿ ಕೋಚ್ ಅವಧಿ ಮುಗಿದ ಬಳಿಕ ವೆಟ್ಟೋರಿಯನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಇವರು ಏಷ್ಯಾದಲ್ಲಿ ಅತಿ ಹೆಚ್ಚು ವೇತನ ಪಡೆದಿದ್ದ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.