ಕರ್ನಾಟಕ

karnataka

ETV Bharat / sports

ಮಾಜಿ ಕ್ರಿಕೆಟಿಗ ಲಕ್ಷ್ಮೀ ರತನ್​ ಶುಕ್ಲಾ ಪತ್ನಿಗೆ ಕೊರೊನಾ ಪಾಸಿಟಿವ್​

ಭಾರತದ ಪರ 3 ಏಕದಿನ ಪಂದ್ಯವನ್ನಾಡಿರುವ ಶುಕ್ಲಾ ಐಪಿಎಲ್​ನಲ್ಲಿ ಕೆಕೆಆರ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದಾರೆ.

ಕ್ರಿಕೆಟಿಗ ಲಕ್ಷ್ಮೀ ರತನ್​ ಶುಕ್ಲಾ ಪತ್ನಿಗೆ ಕೊರೊನಾ ಪಾಸಿಟಿವ್​
ಕ್ರಿಕೆಟಿಗ ಲಕ್ಷ್ಮೀ ರತನ್​ ಶುಕ್ಲಾ ಪತ್ನಿಗೆ ಕೊರೊನಾ ಪಾಸಿಟಿವ್​

By

Published : Jul 11, 2020, 8:43 PM IST

ಕೋಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್‌ ಶುಕ್ಲಾ ಅವರ ಪತ್ನಿ ಹಾಗೂ ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಸ್ಮಿತಾ ಸನ್ಯಾಲ್‌ ಶುಕ್ಲಾ ಅವರಿಗೆ ಕೊರೊನಾ ಪಾಸಿಟಿವ್​ ಇರುವುದು ದೃಡಪಟ್ಟಿದೆ.

ಭಾರತದ ಪರ 3 ಏಕದಿನ ಪಂದ್ಯವನ್ನಾಡಿರುವ ಶುಕ್ಲಾ ಐಪಿಎಲ್​ನಲ್ಲಿ ಕೆಕೆಆರ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದಾರೆ.

ದೇಶದಲ್ಲಿ ಎರಡನೇ ಹಂತದ ಅನ್​ಲಾಕ್​ ಘೋಷಣೆಯಾದ ಮೇಲೆ ಪ್ರತಿದಿನ ಕೋವಿಡ್​ 27 ಸಾವಿರಕ್ಕೂ ಹೆಚ್ಚು ಕೇಸ್​ಗಳು ದಾಖಲಾಗುತ್ತಿವೆ. ಇನ್ನು ಪಶ್ಚಿಮ ಬಂಗಾಳದಲ್ಲೂ 27109 ಪ್ರಕರಣಗಳಿದ್ದು, 9000 ಸಕ್ರಿಯ ಪ್ರಕರಣಗಳಿವೆ. 880 ಮಂದಿ ಕೊರೊನಾ ಬಲಿಯಾಗಿದ್ದಾರೆ.

ತಮ್ಮ ಪತ್ನಿಗೆ ಕೊರೊನಾ ವೈರಸ್​ ಸೋಂಕಿಗೆ ತುತ್ತಾಗಿರುವುದನ್ನು ಸ್ವತಃ ಶುಕ್ಲಾ ಮಾದ್ಯಮದಕ್ಕೆ ತಿಳಿಸಿದ್ದಾರೆ. ಪತ್ನಿ , ತಾವೂ ಹಾಗೂ ಕುಟುಂಬ ಸದಸ್ಯರು ಹೋಮ್​ ಐಸೋಲೇಸನ್​ಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ.

' ಹೌದು, ನನ್ನ ಪತ್ನಿಗೆ ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಜ್ವರದ ಲಕ್ಷಣ ಕಾಣಿಸಿಕೊಂಡಿದ್ದರಿಂದ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರಿಗೆ ಸೋಂಕು ತಗುಲಿರುವುದು ವರದಿಯಲ್ಲಿ ಖಾತ್ರಿಯಾಗಿದೆ. ನನ್ನ ಇಬ್ಬರು ಗಂಡು ಮಕ್ಕಳು, ವಯಸ್ಸಾದ ಅಪ್ಪ ಸೇರಿದಂತೆ ಎಲ್ಲರೂ ಸ್ವಯಂ ಕ್ವಾರಂಟೈನ್​ನಲ್ಲಿರಲಿದ್ದೇವೆ. ನಾವು ಕೂಡ ಗುರುವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದೇವೆ' ಎಂದು ಶುಕ್ಲಾ ಅವರು ಶನಿವಾರ ತಿಳಿಸಿದ್ದಾರೆ.

ABOUT THE AUTHOR

...view details