ಕರ್ನಾಟಕ

karnataka

ETV Bharat / sports

ನಿವೃತ್ತಿ ನಂತರ ಮತ್ತೊಂದು ಇನ್ನಿಂಗ್ಸ್​: LPL​ಗಾಗಿ ಶ್ರೀಲಂಕಾಗೆ ತೆರಳಿದ ಪಠಾಣ್ - ಕ್ಯಾಂಡಿ ಟಸ್ಕರ್ಸ್​

2020ರ ಆರಂಭದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಪಠಾಣ್​ ಕಾಮೆಂಟೇಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಿವೃತ್ತಿ ನಂತರ ಮತ್ತೊಮ್ಮೆ ಕ್ರಿಕೆಟ್​ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇರ್ಫಾನ್​ ಪಠಾಣ್​
ಇರ್ಫಾನ್​ ಪಠಾಣ್​

By

Published : Nov 17, 2020, 4:19 PM IST

ಕೊಲಂಬೊ: ನವೆಂಬರ್​ 26ರಂದು ಆರಂಭವಾಗಲಿರುವ ಚೊಚ್ಚಲ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸಲು ಭಾರತದ ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್​ ಸೋಮವಾರ ಕೊಲಂಬೊ ತಲುಪಿದ್ದಾರೆ.

2020ರ ಆರಂಭದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಪಠಾಣ್​ ಕಾಮೆಂಟೇಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಿವೃತ್ತಿ ನಂತರ ಮತ್ತೊಮ್ಮೆ ಕ್ರಿಕೆಟ್​ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇರ್ಫಾನ್ ಪಠಾಣ್ ಬಾಲಿವುಡ್ ನಟ ಸೊಹೈಲ್ ಖಾನ್​ ಮಾಲೀಕತ್ವದ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು ಕ್ರಿಸ್ ಗೇಲ್, ಕುಸಲ್ ಪೆರೆರಾ, ಕುಸಲ್ ಮೆಂಡಿಸ್ ಮತ್ತು ನುವಾನ್ ಪ್ರದೀಪ್, ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೇಟ್ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ.

ಎಲ್​ಪಿಎಲ್​ಗಾಗಿ ಶ್ರೀಲಂಕಾದಲ್ಲಿದ್ದೇನೆ. ಹೊಸ ಜರ್ನಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ನವೆಂಬರ್​ 26ರಿಂದ ಆರಂಭಗೊಳ್ಳಲಿರುವ ಈ ಟೂರ್ನಿಯಲ್ಲಿ 5 ತಂಡಗಳು ಭಾಗವಹಿಸಲಿವೆ. ಕೊಲಂಬೊ, ಕ್ಯಾಂಡಿ, ಗಾಲೆ, ದಂಬುಲಾ, ಜಫ್ನಾ ಹೆಸರಿನ ತಂಡಗಳು 21 ದಿನಗಳ ಟೂರ್ನಿಯಲ್ಲಿ 23 ಪಂದ್ಯಗಳನ್ನಾಡಲಿವೆ.

ABOUT THE AUTHOR

...view details