ಕರ್ನಾಟಕ

karnataka

ETV Bharat / sports

ಭಾರತ ತಂಡದ ಆಲ್​ರೌಂಡರ್​ ಯೂಸುಫ್ ಪಠಾಣ್​ಗೆ 37ರ ಸಂಭ್ರಮ

ಯೂಸುಫ್ ಪಠಾಣ್​ 2007 ರಲ್ಲಿ ಟಿ-20 ವಿಶ್ವಕಪ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ಭಾರತದ ತಂಡದ ಪರ 57 ಏಕದಿನ ಹಾಗೂ 22 ಟಿ-20 ಪಂದ್ಯಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 113.6ರ ಸ್ಟ್ರೈಕ್ ​ರೇಟ್​ನಲ್ಲಿ 810 ರನ್​ ಮತ್ತು 33 ವಿಕೆಟ್​, 145.58ರ ಸ್ಟ್ರೈಕ್​ರೇಟ್​ನಲ್ಲಿ 236 ರನ್ ಮತ್ತು 13 ವಿಕೆಟ್ ಪಡೆದಿದ್ದಾರೆ.

ಯೂಸುಫ್ ಪಠಾಣ್​ಗೆ 37ರ ಸಂಭ್ರಮ
ಯೂಸುಫ್ ಪಠಾಣ್​ಗೆ 37ರ ಸಂಭ್ರಮ

By

Published : Nov 17, 2020, 3:27 PM IST

ಬರೋಡ:ಧೋನಿ ನೇತೃತ್ವದಲ್ಲಿ ಭಾರತ ಗೆದ್ದಿರುವ 2007ರ ಟಿ - 20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಪಡೆದಿದ್ದ ಬರೋಡದ ಆಲ್​ರೌಂಡರ್​ ಯೂಸುಫ್ ಪಠಾಣ್​ ಇಂದು 37ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದಾರೆ.

ಯೂಸುಫ್ ಪಠಾಣ್​ 2007ರಲ್ಲಿ ಟಿ - 20 ವಿಶ್ವಕಪ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ಭಾರತದ ತಂಡದ ಪರ 57 ಏಕದಿನ ಹಾಗೂ 22 ಟಿ-20 ಪಂದ್ಯಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 113.6ರ ಸ್ಟ್ರೈಕ್​ರೇಟ್​ನಲ್ಲಿ 810 ರನ್​ ಮತ್ತು 33 ವಿಕೆಟ್​, 145.58ರ ಸ್ಟ್ರೈಕ್​ರೇಟ್​ನಲ್ಲಿ 236 ರನ್ ಮತ್ತು 13 ವಿಕೆಟ್ ಪಡೆದಿದ್ದಾರೆ.

37ನೇ ವಸಂತಕ್ಕೆ ಕಾಲಿಟ್ಟ ಯೂಸುಫ್​ಗೆ ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ ವಿಶೇಷ ಪೋಸ್ಟ್​ ಮೂಲಕ ಶುಭಕೋರಿದೆ. 2007 ಮತ್ತು 2011ರ ವಿಶ್ವಕಪ್​ ವಿನ್ನರ್​ಗೆ ಜನ್ಮದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದೆ.

ಎರಡು ವಿಶ್ವಕಪ್​ಗಳಲ್ಲಿ ಭಾರತದ ಸಹ ಆಟಗಾರರನಾಗಿದ್ದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್​," ಹುಟ್ಟು ಹಬ್ಬದ ಶುಭಾಶಯಗಳು ಚಾಚಾ, ನೀವೊಬ್ಬ ರನ್ ತಯಾರಿಸುವ ಮಾರಕ ಯಂತ್ರ! ನಿಮ್ಮ ದಿನ ಸಾಕಷ್ಟು ಪ್ರೀತಿ ಮತ್ತು ನಗೆಯಿಂದ ತುಂಬಿರಲಿ! ನೀವು ಮತ್ತು ನಿಮ್ಮ ಮನೆಯಲ್ಲಿರುವವರೆಲ್ಲರೂ ಆರೋಗ್ಯದಿಂದ ಇರಿ ಎಂದು ಭಾವಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details