ಮುಂಬೈ:ಮಹಾರಾಷ್ಟ್ರದ ಮಾಜಿ ಕ್ರಿಕೆಟಿಗ ಶ್ರೀ ಸದಾಶಿವ್ ಪಾಟೀಲ್ ಅವರ ಮಂಗಳವಾರ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಬಿಸಿಸಿಐ ಸಂತಾಪ ಸೂಚಿಸಿದೆ.
ಪಾಟೀಲ್ ಭಾರತ ತಂಡದ ಪರ ಒಂದು ಟೆಸ್ಟ್‌ನಲ್ಲಿ ಪ್ರತಿನಿಧಿಸಿದ್ದರು. 11ಕ್ಕು ಹೆಚ್ಚು ಆವೃತ್ತಿಗಳಲ್ಲಿ 36 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

ಕೊಲ್ಹಾಪುರದ ರುಯಿಕರ್ ಕಾಲೋನಿಯ ಅವರ ನಿವಾಸದಲ್ಲಿ ಮಂಗಳವಾರ ನಿದ್ರಿಸುತ್ತಿದ್ದಾಗಲೆ ನಿಧನರಾಗಿದ್ದಾರೆ ಎಂದು ಕೊಲ್ಹಾಪುರ ಜಿಲ್ಲಾ ಕ್ರಿಕೆಟ್ ಸಂಘದ ಮಾಜಿ ಪದಾಧಿಕಾರಿ ರಮೇಶ್ ಕಡಮ್ ಪಿಟಿಐಗೆ ತಿಳಿಸಿದ್ದಾರೆ.
ಮಧ್ಯಮ ವೇಗಿಯಾಗಿದ್ದ ಅವರು ನ್ಯೂಜಿಲ್ಯಾಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದರು. ಅವರು ಆ ಪಂದ್ಯದಲ್ಲಿ 51 ರನ್ ನೀಡಿ 2 ವಿಕೆಟ್ ಪಡೆದಿದ್ದರು. ವಿಶೇಷವೆಂದರೆ ಎರಡೂ ಇನ್ನಿಂಗ್ಸ್ನಲ್ಲೂ ಜಾನ್ ರೀಡ್ ವಿಕೆಟ್ ಪಡೆದಿದ್ದರು. ಆ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಅವರನ್ನು ಆಯ್ಕೆ ಮಾಡಿರಲಿಲ್ಲ.
1952ರಿಂದ 1964ರವರೆಗ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದ ಅವರು 83 ವಿಕೆಟ್ ಪಡೆದಿದ್ದರು. ಅಲ್ಲದೆ ಇಂಗ್ಲೆಂಡ್ನ ಕೌಂಟಿ ತಂಡದ ಪರವೂ ಆಡಿದ್ದ ಅವರು 52 ಪಂದ್ಯಗಳಿಂದ 111 ವಿಕೆಟ್ ಪಡೆದಿದ್ದರು.
TAGGED:
ಬಿಸಿಸಿಐ