ಕರ್ನಾಟಕ

karnataka

ETV Bharat / sports

ಕೊರೊನಾ: ಮಾಜಿ ಕ್ರಿಕೆಟರ್ ಆರೋಗ್ಯ ಸ್ಥಿತಿ ಗಂಭೀರ - ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್

ಇಂದು ಬೆಳಗ್ಗೆ ಚೇತನ್​ ಅವರ ಮೂತ್ರಪಿಂಡ ವೈಫಲ್ಯವಾಗಿದ್ದು, ಬಹು-ಅಂಗಾಂಗ ವೈಫಲ್ಯವನ್ನು ಸಹ ಹೊಂದಿದ್ದಾರೆ. ಸದ್ಯ ಅವರನ್ನು ವೆಂಟಿಲೇಟರ್​ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ
ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ

By

Published : Aug 15, 2020, 8:41 PM IST

ನವದೆಹಲಿ: ಕೋವಿಡ್​ ಸೋಂಕು ಪೀಡಿತ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಬಹು-ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಗುರುಗ್ರಾಮ್‌ನ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಜುಲೈ 12 ರಂದು ಕೋವಿಡ್​ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ 73 ವರ್ಷದ ಚೌಹಾಣ್​ ಅವರನ್ನು ಲಖನೌದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಅವರನ್ನು ಗುರುಗ್ರಾಮ್‌ನ ಮೆಡಂತಾಗೆ ಸ್ಥಳಾಂತರಿಸಲಾಯಿತು.

ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ

ಇಂದು ಬೆಳಗ್ಗೆ ಚೇತನ್​ ಅವರ ಮೂತ್ರಪಿಂಡ ವೈಫಲ್ಯವಾಗಿದ್ದು, ಬಹು-ಅಂಗಾಂಗ ವೈಫಲ್ಯವನ್ನು ಸಹ ಹೊಂದಿದ್ದಾರೆ. ಸದ್ಯ ಅವರನ್ನು ವೆಂಟಿಲೇಟರ್​ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details