ಮುಂಬೈ: ಭಾರತದ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿದ್ದ ಮಾಜಿ ಆಲ್ರೌಂಡರ್ ಕ್ರಿಕೆಟರ್ ಬಾಪು ನಾಡಕರ್ಣಿ ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಸಾವಿಗೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.
ಲೆಫ್ಟ್ ಆರ್ಮ್ ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ಆಟಗಾರ ಟೀಂ ಇಂಡಿಯಾದಲ್ಲಿ 1955-68ರ ನಡುವೆ 41 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ಪಂದ್ಯಗಳಲ್ಲಿ ಅವರು 1,414 ರನ್ ಹಾಗೂ 88 ವಿಕೆಟ್ ಗಳಿಕೆ ಸಾಧನೆ ಮಾಡಿದ್ದಾರೆ. 1964ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ 1.67ರ ಸರಾಸರಿಯಲ್ಲಿ ರನ್ ಮಾಡಿದ್ದ ನಾಡಕರ್ಣಿ ಬರೋಬ್ಬರಿ 21 ಮೆಡನ್ ಓವರ್ ಎಸೆದಿದ್ದರು.