ಜೈಪುರ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮತ್ತಷ್ಟು ಕಾವು ಪಡೆದುಕೊಂಡಿದೆ. ಕ್ರಿಕೆಟರ್ಸ್ ದಾಖಲೆಗಳ ಸುರಿಮಳೆಗೈಯುತ್ತಿದ್ದು, ಇದರ ಮಧ್ಯೆ ಕೆಲವೊಂದು ವಿವಾದಗಳು ಕೂಡ ಕಾಮನ್ ಆಗಿವೆ. ಸದ್ಯ ಮೈದಾನದಲ್ಲಿ ಅಪರೂಪದ ಘಟನೆವೊಂದು ನಡೆಯುತ್ತಿದ್ದು, ಇದಕ್ಕೆ ಎಲ್ಲಾ ಕ್ರಿಕೆಟರ್ಸ್ ಕಂಗೆಟ್ಟು ಹೋಗಿದ್ದಾರೆ.
ನಿನ್ನೆ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆಕೆಆರ್ 8ರನ್ಗಳ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ನಡೆದ ಅಪರೂಪದ ಸಂಗತಿಯಿಂದ ಕ್ರಿಕೆಟರ್ಸ್ ತಲೆಕೆಡಿಸಿಕೊಳ್ಳುವಂತಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ರಾಜಸ್ಥಾನ ರಾಯಲ್ಸ್, ಕೆಕೆಆರ್ ಗೆಲುವಿಗೆ 139ರನ್ಗಳ ಟಾರ್ಗೆಟ್ ನೀಡಿತ್ತು. ಇದರ ಬೆನ್ನತ್ತಿದ್ದ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಲೀನ್ ಕೇವಲ 13ರನ್ಗಳಿಕೆ ಮಾಡಿದ್ದ ವೇಳೆ ಧವಳ್ ಕುಲಕರ್ಣಿ ಬೌಲಿಂಗ್ ಮಾಡುವಾಗ ಅವರು ಎಸೆದ ಚೆಂಡು ನೇರವಾಗಿ ಸ್ಟಂಪ್ಗೆ ಬಿದ್ದಿದೆ. ತಾನು ಔಟಾಗಿದ್ದೇನೆಂದು ಕ್ರಿಸ್ ಲೀನ್ ಮೈದಾನ ತೊರೆಯಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅಂಪೈರ್ ಅವರಿಗೆ ಬೆಲ್ಸ್ ಹಾರದ ವಿಷಯವನ್ನ ತಿಳಿಸಿದ್ದಾರೆ. ಹೀಗಾಗಿ ಅವರು ಬ್ಯಾಟಿಂಗ್ ಮಾಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ದರು.