ಮ್ಯಾಂಚೆಸ್ಟರ್:ಪಾಕಿಸ್ತಾನ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಿನ್ನೆ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಆತಿಥೇಯರು 326 ರನ್ಗಳಿಕೆ ಮಾಡಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಈ ವೇಳೆ ಮೈದಾನದಲ್ಲಿ ಕುತೂಹಲಕಾರಿ ಸನ್ನಿವೇಶ ನಡೆಯಿತು.
ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ 12ನೇ ಆಟಗಾರನಾಗಿ ಮೈದಾನಕ್ಕಿಳಿದು ಸಹ ಆಟಗಾರನಿಗೋಸ್ಕರ ಶೂ, ನೀರಿನ ಬಾಟಲಿ ತೆಗೆದುಕೊಂಡು ಬಂದಿದ್ದರು. ಈ ಘಟನೆ ಪಾಕಿಸ್ತಾನದ ಮಾಜಿ ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕ್ ತಂಡದ ಮಾಜಿ ನಾಯಕನೊಬ್ಬನನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಶೋಭೆ ತರುವಂಥದ್ದಲ್ಲ. ಒಂದ್ವೇಳೆ ಅವರೇ ಸ್ವಯಂಪ್ರೇರಿತರಾಗಿ ಈ ರೀತಿ ನಡೆದುಕೊಂಡಿದ್ದರೆ ಮುಂದಿನ ದಿನಗಳಲ್ಲಿ ಇಂಥ ಬೆಳವಣಿಗೆಗಳನ್ನು ತಡೆಯಿರಿ ಎಂದು ಪಾಕ್ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ತಿಳಿಸಿದ್ದಾರೆ.