ಕರ್ನಾಟಕ

karnataka

ಮೊದಲ ಟೆಸ್ಟ್​ನಲ್ಲಿ ವಾಟರ್​ ಬಾಯ್ ಆದ ಸರ್ಫರಾಜ್: ನಿವೃತ್ತಿ ಹೊಂದುವಂತೆ ಸಲಹೆ ನೀಡಿದ ರಮೀಜ್ ರಾಜಾ

By

Published : Aug 12, 2020, 9:11 AM IST

ಸರ್ಫರಾಜ್‌ಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಸಲಹೆ ನೀಡುತ್ತೇನೆ ಮತ್ತು ವೈಟ್-ಬಾಲ್ ಕ್ರಿಕೆಟ್‌ನತ್ತ ಗಮನ ಹರಿಸಬೇಕು ಎಂದು ವೀಕ್ಷಕ ವಿವರಣೆಕಾರ ರಮೀಜ್​ ರಾಜಾ ಸಲಹೆ ನೀಡಿದ್ದಾರೆ.

Ramiz Raja advises Sarfaraz Ahmed
ಸರ್ಫರಾಜ್​​ಗೆ ರಮೀಜ್ ರಾಜಾ ಸಲಹೆ

ಕರಾಚಿ( ಪಾಕಿಸ್ತಾನ): ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಟೆಸ್ಟ್‌ನಿಂದ ನಿವೃತ್ತಿ ಹೊಂದಬೇಕು ಮತ್ತು ಏಕದಿನ ಕ್ರಿಕೆಟ್‌ನತ್ತ ಗಮನ ಹರಿಸಬೇಕು ಎಂದು ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ನಾಯಕ ಸರ್ಫರಾಜ್, ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಸರಣಿ ಮೊದಲ ಪಂದ್ಯದಲ್ಲಿ 12ನೇ ಆಟಗಾರನಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂತು.

ಸರ್ಫರಾಜ್ ಅಹ್ಮದ್

"ನನ್ನ ಪುಸ್ತಕದಲ್ಲಿ, ನೀವು ಒಮ್ಮೆ ನಾಯಕನಾಗಿದ್ದು ಮತ್ತು ಆ ಸ್ಥಾನದಲ್ಲಿ ಉಳಿದುಕೊಂಡಿರುವುದು ನನಗೆ ಸ್ಪಷ್ಟವಾಗಿದೆ. ಅದರೀಗ ಕೆಳಗಿಳಿದು ಬೆಂಚ್‌ ಕಾಯುವುದು ತುಂಬಾ ಕಷ್ಟ" ಎಂದು ಪ್ರಸಿದ್ಧ ಕಮೆಂಟೇಟರ್ ಆಗಿರುವ ರಾಜಾ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಟೆಸ್ಟ್​ನಲ್ಲಿ ಸರ್ಫರಾಜ್ ಅಹ್ಮದ್ ಸಾಧನೆ

"ನಾನು ಸರ್ಫರಾಜ್‌ಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಸಲಹೆ ನೀಡುತ್ತೇನೆ ಮತ್ತು ವೈಟ್-ಬಾಲ್ ಕ್ರಿಕೆಟ್‌ನತ್ತ ಗಮನ ಹರಿಸಬೇಕು, ಈ ಸ್ವರೂಪದಲ್ಲಿ ಅವರು ತುಂಬಾ ಒಳ್ಳೆಯ ಅಟಗಾರ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದ್ದಾರೆ" ಎಂದು ರಾಜಾ ಹೇಳಿದ್ದಾರೆ.

ಸರ್ಫರಾಜ್ ಅವರಂತಹ ಹಿರಿಯ ಆಟಗಾರ ಮೈದಾನಕ್ಕೆ ಪಾನೀಯಗಳನ್ನು ಹೊತ್ತುಕೊಂಡು ಹೋಗುವುದು ಕ್ರಿಕೆಟ್‌ನಲ್ಲಿ ಅಪರೂಪವಲ್ಲದಿದ್ದರೂ ಪಾಕಿಸ್ತಾನದಲ್ಲಿ ಆತನಿಗೆ ಮುಖಭಂಗವಾಗಿದೆ ಎಂದಿದ್ದಾರೆ. ಸರ್ಫರಾಜ್ ಶೀಘ್ರದಲ್ಲೇ ಟೆಸ್ಟ್​ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಆದ್ದರಿಂದ ಅವರು ವೈಟ್-ಬಾಲ್ ಕ್ರಿಕೆಟ್ ಬಗ್ಗೆ ಗಮನಹರಿಸಬೇಕು, ಅಲ್ಲಿ ಅವರು ಆಡುತ್ತಾರೆ ಮತ್ತು ಗೌರವಿಸಲ್ಪಡುತ್ತಾರೆ ಎಂದಿದ್ದಾರೆ.

ABOUT THE AUTHOR

...view details