ಕರ್ನಾಟಕ

karnataka

ETV Bharat / sports

ಬಾಂಗ್ಲಾದ ಮಾಜಿ ಕ್ರಿಕೆಟಿಗನಿಗೆ ಕೊರೊನಾ ಪಾಸಿಟಿವ್‌ - ಬಾಂಗ್ಲಾದೇಶ

ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ನಫೀಜ್‌ ಇಕ್ಬಾಲ್ ಮತ್ತು ಏಕದಿನ ತಂಡದ ನಾಯಕ ತಮೀಮ್‌ ಇಕ್ಬಾಲ್‌ ಅವರ ಹಿರಿಯ ಸಹೋದರನಿಗೆ ಕೊರೊನಾ ವೈರಸ್‌ ದೃಢಪಟ್ಟಿದೆ.

former-bangladesh-cricketer-tests-positive-for-corona
ಬಾಂಗ್ಲಾದ ಮಾಜಿ ಕ್ರಿಕೆಟಿಗನಿಗೆ ಕೊರೊನಾ ಪಾಸಿಟಿವ್‌

By

Published : Jun 20, 2020, 1:13 PM IST

ಡಾಕಾ: ಮಹಾಮಾರಿ ಕೋವಿಡ್‌ ಕ್ರೀಡಾಪಟುಗಳು, ಉದ್ಯಮಿಗಳು ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಯಾವುದೇ ಭೇದಭಾವವಿಲ್ಲದೆ ಕಾಡುತ್ತಿದೆ. ಇದೀಗ ಬಾಂಗ್ಲಾದೇಶದ ಏಕದಿನ ತಂಡದ ನಾಯಕ ತಮೀಮ್‌ ಇಕ್ಬಾಲ್‌ ಅವರ ಹಿರಿಯ ಸಹೋದರ ಮತ್ತು ಮಾಜಿ ಕ್ರಿಕೆಟಿಗ ನಫೀಜ್‌ ಇಕ್ಬಾಲ್‌ಗೆ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ನಫೀಜ್‌ ಅವರಲ್ಲಿ ಕಿಲ್ಲರ್‌ ಕೋವಿಡ್‌ ಸೋಂಕು ಇರುವುದು ಪತ್ತೆಯಾಗಿದ್ದು, ಸದ್ಯ ಚಿತ್ತಗಾಂಗ್‌ನಲ್ಲಿರುವ ಹೋಮ್‌ ಐಸೊಲೇಷನ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಾಂಗ್ಲಾ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ನಫೀಜ್‌ ಇಕ್ಬಾಲ್‌ ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದು, 2003 ರಿಂದ 2016ರವರಿಗೆ ಬಾಂಗ್ಲಾ ಪರ ಆಡಿದ್ದರು. 34 ವರ್ಷದ ಈ ಆಟಗಾರ 11 ಟೆಸ್ಟ್‌ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 518 ಮತ್ತು 309 ರನ್‌ ಗಳಿಸಿದ್ದಾರೆ.

ಕಳೆದ ತಿಂಗಳಿನಲ್ಲಿ ಬಾಂಗ್ಲಾದೇಶ ಅಭಿವೃದ್ಧಿ ತರಬೇತುದಾರ ಮತ್ತು ಮಾಜಿ ಪ್ರಥಮ ದರ್ಜೆಯ ಕ್ರಿಕೆಟರ್‌ ಅಶ್ಫಿಕ್‌ ರೆಹಮಾನ್‌ಗೆ ಕೊರೊನಾ ವೈರಸ್‌ ಇರುವುದು ದೃಢಪಟ್ಟಿತ್ತು.

ಪಾಕಿಸ್ತಾನದ ಕ್ರಿಕೆಟಿಗರಾದ ಶಾಹೀದ್‌ ಅಫ್ರಿದಿ, ತೌಫಿಕ್‌ ಉಮರ್‌ ಮತ್ತು ಝಫರ್ ಸರ್ಫರಾಜ್‌ಗೂ ಕೋವಿಡ್‌ ಪಾಸಿಟಿವ್‌‌ ಬಂದಿದೆ.

ABOUT THE AUTHOR

...view details