ಕರ್ನಾಟಕ

karnataka

By

Published : Sep 26, 2020, 5:16 PM IST

ETV Bharat / sports

ಪಿಯೂಶ್ ಚಾವ್ಲಾ, ಜಡೇಜಾ ಬೌಲಿಂಗ್​ ತಂಡಕ್ಕೆ ಹಿನ್ನಡೆಯಾಗುತ್ತಿದೆ: ಫ್ಲೆಮಿಂಗ್​

ಕಳೆದ ಮೂರು ಪಂದ್ಯಗಳಿಂದ ರವೀಂದ್ರ ಜಡೇಜಾ ಕೇವಲ 2 ವಿಕೆಟ್​ ಪಡೆದುಕೊಂಡಿದ್ದಾರೆ. ಜೊತೆಗೆ ಎಲ್ಲಾ ಪಂದ್ಯಗಳಲ್ಲೂ 40 ಕ್ಕೂ ಹೆಚ್ಚು ರನ್​ ಬಿಟ್ಟುಕೊಡುತ್ತಿದ್ದಾರೆ. ಇನ್ನು ಪಿಯೂಷ್ ಚಾವ್ಲಾ ರಾಜಸ್ಥಾನ್​ ರಾಯಲ್ಸ್ ವಿರುದ್ಧ 55 ರನ್​ ಬಿಟ್ಟುಕೊಟ್ಟಿದ್ದರು.

ಸ್ಟೀಫನ್ ಫ್ಲಮಿಂಗ್
ಸ್ಟೀಫನ್ ಫ್ಲಮಿಂಗ್

ದುಬೈ: ಅನುಭವಿ ಸ್ಪಿನ್ನರ್​ಗಳಾದ ಪಿಯೂಷ್ ಚಾವ್ಲಾ ಹಾಗೂ ರವೀಂದ್ರ ಜಡೇಜಾ ಅವರ ಬೌಲಿಂಗ್ ವೈಫಲ್ಯ ತಂಡಕ್ಕೆ ಹಿನ್ನಡೆಯಾಗುತ್ತಿದೆ ಎಂದು ಸಿಎಸ್​ಕೆ ಕೋಚ್ ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.

ಶುಕ್ರವಾರ ನಡೆದ ಡೆಲ್ಲಿ ಕ್ಯಾಪಿಟಲ್​ ವಿರುದ್ಧ ಸಿಎಸ್​ಕೆ 44 ರನ್​ಗಳ ಹೀನಾಯ ಸೋಲು ಕಂಡ ನಂತರ ಫ್ಲೆಮಿಂಗ್ ಈ ಮಾತನ್ನು ಹೇಳಿದ್ದಾರೆ.

ಕಳೆದ ಮೂರು ಪಂದ್ಯಗಳಿಂದ ರವೀಂದ್ರ ಜಡೇಜಾ ಕೇವಲ 2 ವಿಕೆಟ್​ ಪಡೆದುಕೊಂಡಿದ್ದಾರೆ. ಜೊತೆಗೆ ಎಲ್ಲಾ ಪಂದ್ಯಗಳಲ್ಲೂ 40 ಕ್ಕೂ ಹೆಚ್ಚು ರನ್​ ಬಿಟ್ಟುಕೊಡುತ್ತಿದ್ದಾರೆ. ಇನ್ನು ಪಿಯೂಷ್ ಚಾವ್ಲಾ ರಾಜಸ್ಥಾನ್​ ರಾಯಲ್ಸ್ ವಿರುದ್ಧ 55 ರನ್​ ಬಿಟ್ಟುಕೊಟ್ಟಿದ್ದರು.

ಸ್ಟೀಫನ್ ಫ್ಲಮಿಂಗ್

ಹೌದು, ಸ್ಪಿನ್ ಬೌಲಿಂಗ್ ವಿಭಾಗ ತಂಡದಲ್ಲಿ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಏಕೆಂದರೆ ಆ ವಿಭಾಗವೇ ತಂಡದ ಬಲವಾಗಿದೆ. ಸ್ಪಿನ್ ಬೌಲಿಂಗ್ ಕಳೆದ 12 ವರ್ಷಗಳಿಂದ ಸಿಎಸ್​ಕೆ ತಂಡದ ಪ್ರಮುಖ ಅಸ್ತ್ರವಾಗಿದೆ. ಖಂಡಿತ ನಾವು ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಆದರೆ ಟೂರ್ನಿಯಲ್ಲಿ ಸ್ಪಿನ್​ ಬೌಲಿಂಗ್​ ಪ್ರಮುಖ ಭಾಗವಾಗಲಿದೆ ಎಂದು ಫ್ಲಮಿಂಗ್​ ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಾವು ಕಳೆದ ಮೂರು ಪಂದ್ಯಗಳನ್ನು ಮೂರು ವಿಭಿನ್ನ ಸ್ಥಳಗಳಲ್ಲಿ ಆಡಿದ್ದು, ವಿಭಿನ್ನ ಪರಿಸ್ಥಿತಿಯಲ್ಲಿ ಆಡಿರುವುದು ಸೋಲಿಗೆ ಕಾರಣವಾಗಿದೆ. ಬೌಲಿಂಗ್ ಮಾಡುವಾಗ ವೇಗ ಮತ್ತು ಶೈಲಿಯನ್ನು ಸರಿಹೊಂದಿಸಿಕೊಳ್ಳಲು ನಾವು ಹೆಣಗಾಡುತ್ತಿದ್ದೇವೆ. ಕಳೆದ ಕೆಲವು ಪಂದ್ಯಗಳಲ್ಲಿ ನಾವು ಉತ್ತಮವಾಗಿ ಬೌಲಿಂಗ್ ಮಾಡಿಲ್ಲ, ಮುಂದಿನ ಪಂದ್ಯದೊಳಗಾಗಿ ನಾವು ಅದನ್ನು ಸರಿಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ ಮುಂಬೈಗೆ ಸೋಲುಣಿಸಿದ್ದ ಸಿಎಸ್​ಕೆ ನಂತರ ರಾಜಸ್ಥಾನ್​ ಹಾಗೂ ಡೆಲ್ಲಿಯ ಯುವ ಬಳಗ ವಿರುದ್ಧ ಸೋಲು ಕಂಡಿದೆ. ಅಕ್ಟೋಬರ್​ 2ರ ತನಕ ಬಿಡುವಿದ್ದು, ಅಲ್ಲಿಯವರೆಗೆ ತನ್ನ ತಪ್ಪುಗಳನ್ನು ತಿದ್ದಿಕೊಂಡು ಕಮ್​ಬ್ಯಾಕ್ ಮಾಡುವು ವಿಶ್ವಾಸವನ್ನು ಕೋಚ್​ ಫ್ಲೆಮಿಂಗ್ ಹಾಗೂ ನಾಯಕ ಧೋನಿ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details