ಅಹ್ಮದಾಬಾದ್:ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣ ಭಾರತದ ಎರಡನೇ ಹಗಲು - ರಾತ್ರಿ ಟೆಸ್ಟ್‌ಗೆ ಆತಿಥ್ಯ ವಹಿಸಲಿದೆ. ಬುಧವಾರದಿಂದ ಇಂಗ್ಲೆಂಡ್ ವಿರುದ್ಧ ನಡೆಯುವ ಮೂರನೇ ಟೆಸ್ಟ್ ಅಹರ್ನಿಶಿ ಟೆಸ್ಟ್ ಪಂದ್ಯವಾಗಲಿದ್ದು, ಎಲ್ಲರ ಕಣ್ಣುಗಳು ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್ (ಎಸ್‌ಜಿ) ಗುಲಾಬಿ ಚೆಂಡಿನ ಮೇಲಿದೆ.
ಈ ಪಿಂಕ್ ಬಾಲ್ ಅನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ಮಾತ್ರ ಬಳಸಲಾಗುತ್ತಿದೆ. ಮೊದಲ ಬಾರಿ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಬಳಸಲಾಗಿತ್ತು. ಇನ್ನು ಇದು ಭಾರತದ ಪಾಲಿನ 3ನೇ ಅಹರ್ನಿಶಿ ಟೆಸ್ಟ್ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಕೂಕಬುರ್ರಾ ಚೆಂಡಿನಲ್ಲಿ ಆಡಿದೆ.
ಭಾರತದಲ್ಲಿ ಕೇವಲ ಒಮ್ಮೆ ಮಾತ್ರ ಪಿಂಕ್ಬಾಲ್ನಲ್ಲಿ ಆಡಲಾಗಿದೆ. ಅದು 2019 ರ ನವೆಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ಧದ ಅಹರ್ನಿಶಿ ಟೆಸ್ಟ್ನಲ್ಲಿ ಬಳಸಲಾಗಿತ್ತು. ಆದರೆ, ಈ ಟೆಸ್ಟ್ ಕೇವಲ ಎರಡೇ ದಿನ್ನಕ್ಕೆ ಮುಗಿದಿತ್ತು. ಹಾಗಾಗಿ ಎಸ್‌ಜಿ ಚೆಂಡಿನ ನಡವಳಿಕೆಯನ್ನು ನಿರ್ಧರಿಸಲು 2 ದಿನ ತುಂಬಾ ಕಡಿಮೆಯಾಗಿದೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಿಂಕ್ಬಾಲ್ನ ಗುಣಮಟ್ಟ ತಿಳಿಯಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಕಂಪನಿಗಳ ಚೆಂಡನ್ನು ಉಪಯೋಗಿಸಲಾಗುತ್ತಿದ್ದು, ಇಂಗ್ಲೆಂಡ್ನಲ್ಲಿ ತಯಾರಾಗುವ ಡ್ಯೂಕ್ ಮೂರನೇ ಬ್ರ್ಯಾಂಡ್ ಆಗಿದೆ. ಆ ರಾಷ್ಟ್ರದಲ್ಲಿ ಇದೇ ಚೆಂಡನ್ನು ಉಪಯೋಗಿಸಲಾಗುತ್ತಿದೆ. ಭಾರತ ಮಾತ್ರ ಎಸ್‌ಜಿ ಚೆಂಡನ್ನು ಉಪಯೋಗಿಸುತ್ತಿದೆ. ನೆರೆರಾಷ್ಟ್ರ ಬಾಂಗ್ಲಾದೇಶವು ಕೆಲವೊಮ್ಮೆ ಈ ಚೆಂಡನ್ನು ಬಳಸಿದೆ.
ಕ್ರಿಕೆಟ್‌ನಲ್ಲಿ ಅತ್ಯಂತ ಜನಪ್ರಿಯ ಚೆಂಡಾಗಿರುವ ಕೂಕಬುರ್ರಾವನ್ನು 7 ರಾಷ್ಟ್ರಗಳು ಉಪಯೋಗಿಸುತ್ತಿವೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್, ಜಿಂಬಾಬ್ವೆ ಮತ್ತು ಬಾಂಗ್ಲಾದೇಶಗಳು ಉಪಯೋಗಿಸುತ್ತಿವೆ.