ನವದೆಹಲಿ:ಈ ಹಿಂದೆ ವಿಶ್ವಕಪ್ಗಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿ 15 ಸದಸ್ಯರನ್ನೊಳಗೊಂಡ ತಂಡ ಆಯ್ಕೆ ಮಾಡಿದ್ದಾಗಲೂ ಅಂಬಾಟಿ ರಾಯುಡುಗೆ ಅವಕಾಶ ನೀಡದಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಸಿಸಿಐ ನಡೆ ವಿರುದ್ಧ ಹರಿಹಾಯ್ದಿದ್ದರು. ಇದೀಗ ಅವರು ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಮತ್ತೆ ಗೌತಮ್ ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.
ವಿಶ್ವಕಪ್ನಲ್ಲಿ ರಿಷಭ್ ಪಂತ್ ಹಾಗೂ ರಾಯುಡುಗೆ ಅವಕಾಶ ನೀಡದೇ ಇರುವುದಕ್ಕೆ ಕ್ರೀಡಾಭಿಮಾನಿಗಳು ಆಯ್ಕೆ ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ, ಇಬ್ಬರು ಆಟಗಾರರನ್ನ ವರ್ಲ್ಡ್ಕಪ್ನ ಮೀಸಲು ಆಟಗಾರರು ಎಂದು ಘೋಷಣೆ ಮಾಡಿತ್ತು. ಇದೇ ವೇಳೆ, ಆರಂಭಿಕ ಆಟಗಾರ ಶಿಖರ್ ಧವನ್ ತಂಡದಿಂದ ಹೊರ ಬೀಳುತ್ತಿದ್ದಂತೆ ರಿಷಭ್ ಪಂತ್ಗೆ ಬುಲಾವ್ ನೀಡಿದ್ದರು. ಇದರ ಮಧ್ಯೆ ವಿಶ್ವಕಪ್ಗೆ ಆಯ್ಕೆಗೊಂಡಿದ್ದ ಆಲ್ರೌಂಡರ್ ವಿಜಯ್ ಶಂಕರ್ ಗಾಯಗೊಂಡು ತಂಡದಿಂದ ಹೊರಬಿದ್ದಾಗ ರಾಯುಡುಗೆ ಅವಕಾಶ ನೀಡದೇ, ಕನ್ನಡಿಗ ಮಯಾಂಕ್ ಅಗರವಾಲ್ಗೆ ಆಯ್ಕೆ ಸಮಿತಿ ಮಣೆ ಹಾಕಿತ್ತು. ಇದು ರಾಯುಡುಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ.