ಸೌತಾಂಪ್ಟನ್:ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ಶನಿವಾರ ಟಿ-20 ಪಂದ್ಯವಾಡಿದ್ದನ್ನು ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಇದೊಂದು ವಿಚಿತ್ರವಾದ ಅನುಭವ ಎಂದಿದ್ದಾರೆ. ಆದರೂ ಇದೇ ಮೊದಲ ಬಾರಿಗೆ ತಾವೂ ಇಂಗ್ಲಿಷ್ ಅಭಿಮಾನಿಗಳಿಂದ ನಿಂದನೆಗೊಳಗಾಗಲಿಲ್ಲ. ಇದೊಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ಕ್ರಿಕೆಟ್ಗೆ ಮರಳಿದ್ದ ವಾರ್ನರ್ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೆಲ್ಲಾ ಅಲ್ಲಿ ಪ್ರೇಕ್ಷಕರಿಂದ ಅಪಹಾಸ್ಯಕ್ಕೀಡಾಗುತ್ತಿದ್ದರು. ವಿಶ್ವಕಪ್ ಮತ್ತು ಆ್ಯಶಸ್ ಟೆಸ್ಟ್ ಸರಣಿಯ ವೇಳೆ ಕೂಡ ಅವರು ಹಲವಾರು ಬಾರಿ ನಿಂದನೆಗೊಳಗಾಗಿದ್ದರು.
ಆದರೆ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಅಭಿಮಾನಿಗಳು ಇರಲಿಲ್ಲ. ಬಯೋ ಸೆಕ್ಯೂರ್ ವಲಯದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ಅನುಮತಿ ನೀಡಿಲ್ಲ. ಆರು ತಿಂಗಳ ಬಳಿಕ ಕ್ರಿಕೆಟ್ಗೆ ಮರಳಿದ್ದ ಆಸ್ಟ್ರೇಲಿಯಾ 2 ರನ್ಗಳಿಗೆ ವಿರೋಚಿತ ಸೋಲು ಕಂಡು ನಿರಾಶೆಯನುಭವಿಸಿತ್ತು. ಪಂದ್ಯದ ನಂತರ ಮಾತನಾಡಿದ ವಾರ್ನರ್ ಅಭಿಮಾನಿಗಳಿಲ್ಲದ್ದರಿಂದ ತಾವೂ ನಿಂದನೆಗೊಳಗಾಗುವುದು ತಪ್ಪಿತು ಎಂದಿದ್ದಾರೆ.