ವಿಶಾಖಪಟ್ಟಣಂ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ಎದುರಾಳಿ ತಂಡದ ಮೂರು ವಿಕೆಟ್ ಕಬಳಿಸುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಿದೆ.
ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಮೈದಾನದಲ್ಲಿ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ರೋಹಿತ್ ಶರ್ಮಾ ಆಕರ್ಷಕ 176 ರನ್ ಹಾಗೂ ಮಯಾಂಕ್ ಅಗರವಾಲ್ 215 ರನ್ಗಳ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 502 ರನ್ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿ ಪಡೆ ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾಗೆ ಅನುಭವಿ ಸ್ಪಿನ್ನರ್ ಅಶ್ವಿನ್ ಆರಂಭದಲ್ಲೇ ಆಘಾತ ನೀಡಿದ್ರು. ಆರಂಭದಲ್ಲೇ ಮಾರ್ಕ್ರಮ್ (5) ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಜಡೇಜಾ ಖಾತೆ ಓಪನ್ ಮಾಡುವುದಕ್ಕೂ ಮುನ್ನವೇ ಡನಿ ಪಿಡ್ತ್(0) ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ರು. ತದನಂತರ 4ರನ್ ಗಳಿಸಿದ್ದ ಥ್ಯೂನಿಸ್ ಡಿ ಬ್ರೂಯಿನ್ಗೂ ಅಶ್ವಿನ್ ಪೆವಿಲಿಯನ್ಗೆ ದಾರಿ ತೋರಿಸಿದ್ರು.
ಜಡೇಜಾಗೆ ಸಹ ಆಟಗಾರರಿಂದ ಅಭಿನಂದನೆ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 3ವಿಕೆಟ್ ನಷ್ಟಕ್ಕೆ 39ರನ್ ಗಳಿಸಿದ್ದು, ಎಲ್ಗರ್ 27ರನ್ ಹಾಗೂ ಬಾವುಮಾ 2ರನ್ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದು, ಇನ್ನು 463ರನ್ಗಳ ಹಿನ್ನಡೆಯಲ್ಲಿದೆ.