ಕರ್ನಾಟಕ

karnataka

ETV Bharat / sports

ಜು.30ರಿಂದ ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​ ಆರಂಭ: ಇಂಗ್ಲೆಂಡ್-​ ಐರ್ಲೆಂಡ್​ ನಡುವೆ  ಪೈಪೋಟಿ - ಐಸಿಸಿ ವಿಶ್ವಕಪ್​ 2023

ಈ ಲೀಗ್​ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು 3 ಪಂದ್ಯಗಳ 4 ಸರಣಿಯನ್ನು ತವರಿನಲ್ಲೂ ಮತ್ತು 4 ಸರಣಿಗಳನ್ನು ವಿದೇಶದಲ್ಲೂ ಆಡಲಿವೆ.

ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​
ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​

By

Published : Jul 27, 2020, 2:07 PM IST

ದುಬೈ: ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​​ನ​​​​ ಮೊದಲ ಆವೃತ್ತಿ​ ಜುಲೈ 30 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಐರ್ಲೆಂಡ್​ ವಿರುದ್ಧ ಸೌತಾಂಪ್ಟನ್​ನಲ್ಲಿ ಎದುರಿಸಲಿದೆ.

ಇದು ಏಕದಿನ ಕ್ರಿಕೆಟ್​ ಟೂರ್ನಮೆಂಟ್​ ಆಗಿದ್ದು, ಇದರಲ್ಲಿ ಟೆಸ್ಟ್​ ಆಡಲು ಮಾನ್ಯತೆ ಪಡೆದಿರುವ ಎಲ್ಲ 12 ರಾಷ್ಟ್ರ ಹಾಗೂ 2015-17ರಲ್ಲಿ ಐಸಿಸಿ ಸೂಪರ್​ ಲೀಗ್​ನಲ್ಲಿ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್​ ಭಾಗವಹಿಸಿಲಿದೆ. ಈ ಟೂರ್ನಿಯಲ್ಲಿ ಗರಿಷ್ಠ ಅಂಕ ಪಡೆದ 7 ತಂಡಗಳು ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ನೇರ ಅರ್ಹತೆ ಪಡೆಯಲಿವೆ. ಉಳಿದ 5 ತಂಡಗಳು ಕ್ವಾಲಿಫೈಯರ್​ ಮೂಲಕ ಬರಲಿವೆ.

ನಾವು ವಿಶ್ವಕಪ್​ ವಿನ್ನರ್​ ಇಂಗ್ಲೆಂಡ್​ ಹಾಗೂ ಐರ್ಲೆಂಡ್​ ನಡುವೆ ಚೊಚ್ಚಲ ಆವೃತ್ತಿಯ ಪುರುಷರ ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​ ಅನ್ನು ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ಐಸಿಸಿ ಜನರಲ್​ ಮ್ಯಾನೇಜರ್ ಜೆಫ್​​ ಅಲ್ಲಾರ್ಡಿಸ್​ ತಿಳಿಸಿದ್ದಾರೆ.

ಈ ಲೀಗ್​ 2023ರ ವಿಶ್ವಕಪ್​ಗೆ ಪ್ರಸ್ತುತತೆ ಮತ್ತು ಸ್ಪರ್ಧೆಯನ್ನು ತರುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ನಡೆಯುವ ವಿಶ್ವಕಪ್​ ಅರ್ಹತೆಗಿಟ್ಟಿಸಿಕೊಳ್ಳಲು ಈ ಲೀಗ್​ ಪರಿಣಾಮಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಲೀಗ್​ನಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು 3 ಪಂದ್ಯಗಳ 4 ಸರಣಿಯನ್ನು ತವರಿನಲ್ಲೂ ಮತ್ತು 4 ಸರಣಿಗಳನ್ನು ವಿದೇಶದಲ್ಲೂ ಆಡಲಿವೆ.

ABOUT THE AUTHOR

...view details