ಕರ್ನಾಟಕ

karnataka

ETV Bharat / sports

ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಭಾರತದ ಪಂದ್ಯದಿಂದಲೇ ಟೂರ್ನಿ ಆರಂಭ - ಮಹಿಳಾ ಟಿ20 ಕ್ರಿಕೆಟ್ ಟೂರ್ನಿ

2020ರಂದು ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಫೆಬ್ರವರಿ 21ರಿಂದ ಮಾರ್ಚ್​ 8ರವರೆಗೆ ನಡೆಯಲಿದೆ.

ಮಹಿಳಾ ಟಿ20 ವಿಶ್ವಕಪ್​

By

Published : Sep 8, 2019, 1:48 PM IST

ದುಬೈ:ಮಹಿಳಾ ಟಿ20 ವಿಶ್ವಕಪ್​ ಅಂತಿಮ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ಬಾಂಗ್ಲಾದೇಶ ಹಾಗೂ ಥಾಯ್ಲೆಂಡ್ ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್​ಗೆ ತೇರ್ಗಡೆಯಾಗಿವೆ.

2020ರಂದು ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಫೆಬ್ರವರಿ 21ರಿಂದ ಮಾರ್ಚ್​ 8ರವರೆಗೆ ನಡೆಯಲಿದೆ.

2020ರ ಮಹಿಳಾ ವಿಶ್ವಕಪ್​ನಲ್ಲಿ ಒಟ್ಟು ಹತ್ತು ತಂಡಗಳು ಪಾಲ್ಗೊಳ್ಳುತ್ತಿದ್ದು ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ 'ಎ' ಗ್ರೂಪ್​ನಲ್ಲಿದ್ದರೆ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಥಾಯ್ಲೆಂಡ್ 'ಬಿ' ಗ್ರೂಪ್​ನಲ್ಲಿದೆ.

ಟೂರ್ನಿ ಆರಂಭಿಕ ಪಂದ್ಯದಲ್ಲಿ ಭಾರತದ ವನಿತೆಯರು ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿವೆ. ಫೆಬ್ರವರಿ 21ರಂದು ಟೂರ್ನಿ ಆರಂಭವಾಗಲಿದೆ. ವಿಶ್ವ ಮಹಿಳಾ ದಿನವಾದ ಮಾರ್ಚ್​ 8ರಂದು ಉಪಾಂತ್ಯ ಪಂದ್ಯ ಮೆಲ್ಬೋರ್ನ್​ನಲ್ಲಿ ಆಯೋಜನೆಯಾಗಿದೆ.

ಗ್ರೂಪ್ 'ಎ' ಪಂದ್ಯಗಳು:

  • 21 ಫೆಬ್ರವರಿ ಆಸ್ಟ್ರೇಲಿಯಾ Vs ಭಾರತ
  • 22 ಫೆಬ್ರವರಿ ನ್ಯೂಜಿಲ್ಯಾಂಡ್ Vs ಶ್ರೀಲಂಕಾ
  • 24 ಫೆಬ್ರವರಿ ಆಸ್ಟ್ರೇಲಿಯಾ Vs ಶ್ರೀಲಂಕಾ
  • 24 ಫೆಬ್ರವರಿ ಭಾರತ Vs ಬಾಂಗ್ಲಾದೇಶ
  • 27 ಭಾರತ Vs ನ್ಯೂಜಿಲ್ಯಾಂಡ್
  • 27 ಆಸ್ಟ್ರೇಲಿಯಾ Vs ಬಾಂಗ್ಲಾದೇಶ
  • 29 ಫೆಬ್ರವರಿ ನ್ಯೂಜಿಲ್ಯಾಂಡ್ Vs ಬಾಂಗ್ಲಾದೇಶ
  • 29 ಫೆಬ್ರವರಿ ಭಾರತ Vs ಶ್ರೀಲಂಕಾ
  • 2 ಮಾರ್ಚ್ ಶ್ರೀಲಂಕಾ Vs ಬಾಂಗ್ಲಾದೇಶ
  • 2 ಮಾರ್ಚ್ ಆಸ್ಟ್ರೇಲಿಯಾ Vs ನ್ಯೂಜಿಲ್ಯಾಂಡ್

ಗ್ರೂಪ್ 'ಬಿ' ಪಂದ್ಯಗಳು:

  • 22 ಫೆಬ್ರವರಿ ವೆಸ್ಟ್ ಇಂಡೀಸ್ Vs ಥಾಯ್ಲೆಂಡ್
  • 23 ಫೆಬ್ರವರಿ ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ
  • 26 ಫೆಬ್ರವರಿ ಇಂಗ್ಲೆಂಡ್ Vs ಥಾಯ್ಲೆಂಡ್
  • 26 ಫೆಬ್ರವರಿ ವೆಸ್ಟ್ ಇಂಡೀಸ್ Vs ಪಾಕಿಸ್ತಾನ
  • 28 ಫೆಬ್ರವರಿ ದಕ್ಷಿಣ ಆಫ್ರಿಕಾ Vs ಥಾಯ್ಲೆಂಡ್
  • 28 ಫೆಬ್ರವರಿ ಇಂಗ್ಲೆಂಡ್ Vs ಪಾಕಿಸ್ತಾನ
  • 1 ಮಾರ್ಚ್ ದಕ್ಷಿಣ ಆಫ್ರಿಕಾ Vs ಪಾಕಿಸ್ತಾನ
  • 1 ಮಾರ್ಚ್​ ಇಂಗ್ಲೆಂಡ್ Vs ವೆಸ್ಟ್ ಇಂಡೀಸ್
  • 3 ಮಾರ್ಚ್​ ಪಾಕಿಸ್ತಾನ Vs ಥಾಯ್ಲೆಂಡ್
  • 3 ಮಾರ್ಚ್​ ವೆಸ್ಟ್ ಇಂಡೀಸ್ Vs ದಕ್ಷಿಣ ಆಫ್ರಿಕಾ

ಸೆಮಿ ಫೈನಲ್​

  • 5 ಮಾರ್ಚ್​
  • 5 ಮಾರ್ಚ್​

ಫೈನಲ್

  • 8 ಮಾರ್ಚ್​

ABOUT THE AUTHOR

...view details