ಡ್ಯುನೇದಿನ್: ಬಾಂಗ್ಲಾದೇಶ ವಿರುದ್ಧ ಮಳೆಯ ಅಡಚಣೆಯ ನಡುವೆಯೂ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ತಂಡ ಫಿನ್ ಅಲೆನ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ 65 ರನ್ಗಳಿಂದ ಗೆಲುವು ಸಾಧಿಸಿ 3-0ಯಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಆರಂಭಿಕರಾದ ಮಾರ್ಟಿನ್ ಗಪ್ಟಿಲ್ ಮತ್ತು ಫಿನ್ ಅಲೆನ್ ಮೊದಲ ವಿಕೆಟ್ಗೆ 85 ರನ್ಗಳ ಜೊತೆಯಾಟ ನೀಡಿದರು. ಗಪ್ಟಿಲ್ 19 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 44 ರನ್ಗಳಿಸಿದರೆ, ಅಲೆನ್ ಕೇವಲ 29 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ಗಳ ನೆರವಿನಿಂದ 71 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಫಿಲಿಫ್ಸ್ 14, ಡೇರಿಲ್ ಮಿಚೆಲ್ 11 ರನ್ಗಳಿಸಿದರು.
142 ರನ್ಗಳ ಗುರಿ ಪಡೆದ ಬಾಂಗ್ಲಾದೇಶ 9.3 ಓವರ್ಗಳಲ್ಲಿ 76 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲುಂಡಿತು. ಮೊಹಮ್ಮದ್ ನಯೀಮ್ 19 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.